Best Viewed in Mozilla Firefox, Google Chrome

Crop Protection with vernacular Names

Crop Protection with vernacular Names

n/a

n/a

n/a

n/a

n/a
7
Dec

ಭತ್ತದ ಕೀಟಪೀಡೆಗಳ ಸಮಗ್ರ ನಿರ್ವಹಣೆ

 ಭತ್ತದ ಕೀಟಪೀಡೆಗಳ ಸಮಗ್ರ ನಿರ್ವಹಣೆ
ಭತ್ತ ಕರ್ನಾಟಕ ರಾಜ್ಯದ ಬಹು ಮುಖ್ಯ ಆಹಾರ ಬೆಳೆರಾಜ್ಯದಲ್ಲಿ ಸುಮಾರು 14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ  ಬೆಳೆಯಲಾಗುತ್ತಿದೆಭತ್ತಕ್ಕೆ ಕರ್ನಾಟಕದಾದ್ಯಂತ 24 ಹೆಚ್ಚು ಕೀಟಗಳು ಕಂಡುಬಂದರೂ, ಕೆಲವೇ ಕೀಟಗಳು ಪ್ರಮುಖ ಪೀಡೆಗಳಾಗಿವೆ. ಬೆಳೆಗೆ ಬಿತ್ತನೆ ಮಾಡಿದಾಗಿನಿಂದ ಹಿಡಿದು ಕಟಾವಾಗುವವರೆಗೂ ಒಂದಲ್ಲ ಒಂದು ರೀತಿಯ ಕೀಟ ಬಾದೆ ಇದ್ದೆ ಇರುತ್ತದೆ. ಕೀಟಗಳ ಭಾದೆ ಸಸಿ ಮಡಿಯಲ್ಲಿರಬಹುದು. ತೆಂಡೆಯೊಡೆಯುವ ಸಮಯದಲ್ಲಿರಬಹುದು ಅಥವಾ ಕಾಳು ಕಟ್ಟುವ ಸಮಯದಲ್ಲಿರಬಹುದು. ಆದ್ದರಿಂದ  ಕೀಟಗಳ  ಹಾವಳಿಯನ್ನು ಅರಿತು ಸಮರ್ಪಕ ಹತೋಟಿ ಕ್ರಮಗಳನ್ನು  ತೆಗೆದುಕೊಳ್ಳುವುದು ಅತ್ಯವಶ್ಯ.

ಭತ್ತದ ಕೀಟಗಳನ್ನು ಬೆಳೆಯನ್ನು ಬಾಧಿಸುವ ಹಂತದ ಆನುಗುಣವಾಗಿ ಮುಖ್ಯವಾಗಿ ಮೂರು ಗುಂಪುಗಳಾಗಿ ವಿಂಗಡಿಸಬಹುದು

1. ಸಸಿ ಮಡಿಯಲ್ಲಿ ಬರುವ ಕೀಟಗಳು : ಥ್ರಿಪ್ಸ್ ನುಸಿ, ಗರಿಜಿಗಿ ಹುಳು ಹಾಗೂ ಹಳದಿ ಕಾಂಡ ಕೊರಕ.
2. ಸಸ್ಯ ಬೆಳವಣಿಗೆ / ತೆಂಡೆಯೊಡೆಯುವ 0ತದಿ0 ಕಾಳು ಕಟ್ಟುವ 0ತದವರಗೆ ಬರುವ ಕೀಟಗಳು : ಹಳದಿ ಕಾಂಡ ಕೊರಕ. ಕೊಳವೆ ಹುಳು, ಗರಿ ಸುತ್ತುವ ಹುಳ, ಕಂದು ಜಿಗಿಹುಳ, ಮುಳ್ಳುಚಿಪ್ಪಿನ ದುಂಬಿ,ಕಂದುಜಿಗಿಹುಳು, ತೆನೆ ತಿಗಣೆ
ಸಸಿ ಮಡಿಯಲ್ಲಿ ಬರುವ ಕೀಟಗಳು

ಥ್ರಿಪ್ಸ್ ನುಸಿ

ಕೀಟವು ತುಂಬಾ ಚಿಕ್ಕದಾಗಿದ್ದು (1-2 ಮಿ.ಮಿ.) ಎಲೆಯ ಮೇಲಿದ್ದುಕೊಂಡು ರಸವನ್ನು ಹೀರುತ್ತದೆಇವುಗಳು ಇತರೆ ಬೆಳೆಗಳ ಮೇಲೆ ಬರುವ ಥ್ರಿಪ್ಸ್ ನುಸಿಗಿಂತ ಸ್ವಲ್ಪ ದೊಡ್ಡದಾಗಿರುತ್ತವೆ. ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಸಸಿ ಮಡಿಯಲ್ಲಿ ಕಾಣಿಸಿಕೊಳ್ಳುತ್ತವೆ. ಮರಿ ಮತ್ತು ಪ್ರೌಢ ಕೀಟಗಳೆರಡು ಎಲೆಗಳ ರಸವನ್ನು ಹೀರುವುದರಿಂದ ಎಲೆಗಳು ಮೊದಲು ಹಳದಿ ಬಣ್ಣಕ್ಕೆ ತಿರುಗಿ ನಂತರ ಸುಟ್ಟು ಹೋದಂತಾಗುತ್ತವೆಎಲೆ ಒಣಗುವಿಕೆ ಮೊದಲು ತುದಿಯಿಂದ ಆರಂಭವಾಗಿ ನಂತರ ಇಡೀ ಎಲೆಗಳಿಗೆ ವ್ಯಾಪಿಸಿ ಎಲೆಯು ನೀಳವಾಗಿ ಮಡಚಿಕೊಳ್ಳುತ್ತದೆಮಡಚಿದ ಎಲೆ ಈರುಳ್ಳಿಯ ಎಲೆಯನ್ನು ಹೋಲುತ್ತದೆ ಹಾಗೂ ಇಡಿ ಎಲೆ0iÉುೀ ಒಣಗಿ ಹೋಗುತ್ತದೆ.

 ಗರಿಜಿಗಿ ಹುಳು

ಪ್ರೌಢ ಮತ್ತು ಮರಿಕೀಟಗಳು ಗರಿಗಳಿಂದ  ರಸ ಹೀರುತ್ತವೆ. ಇದರಿಂದಾಗಿ ಗರಿಗಳ ಮೇಲೆ ಅಲ್ಲಲ್ಲಿ ಬಿಳಿ ಮಚ್ಚೆಗಳು  ಕಾಣಿಸಿಕೊಳ್ಳುತ್ತವೆಹುಳುಗಳ ಬಾದೆ ಹೆಚ್ಚಾದಂತೆ ಗರಿಗಳು  ಸುಟ್ಟಂತೆ ಕಾಣುತ್ತವೆಕೀಟಗಳಿರುವುದನ್ನು ವೀಕ್ಷಿಸುವುದು ಸುಲಭಸಸಿಗಳನ್ನು ಕೈಯಿಂದಲೋ ಅಥವಾ ಒಂದು ಕೋಲಿಂದಲೋ ಅಲುಗಾಡಿಸಿದರೆ ಪ್ರೌಢ ಕೀಟಗಳು ಹಾರುವುದು ಅಥವ   ಜಿಗಿಯುತ್ತಿರುವುದನ್ನು ನೋಡಬಹುದು. ಕೀಟದ ಬಾಧೆ ಹೆಚ್ಚಾಗಿ ಸಸಿ ಮಡಿಯಲ್ಲಿ ನೀರಿನ ಅಭಾವ ಇದ್ದಾಗ ಉಲ್ಭಣಗೊಳ್ಳುತ್ತದೆಆದ್ದರಿಂದ ಸಸಿಮಡಿಯಲ್ಲಿ ಸಮರ್ಪಕವಾಗಿ ನೀರು ಇರುವಂತೆ ನೋಡಿಕೊಳ್ಳಬೇಕು ಕೀಟವು ಬದುವಿನ ಮೇಲಿರುವ ಕಸಗಳಿಂದ ಭತ್ತಕ್ಕೆ ಬರುವುದರಿಂದ ಬದುವನ್ನು ಸ್ವಚ್ಚವಾಗಿಡುವುದು ಒಳಿತು

 ಹಳದಿ ಕಾಂಡ ಕೊರೆಕ

ಕೀಟವು ಭತ್ತದ ಪ್ರಮುಖ ಪೀಡೆಯಾಗಿದ್ದು, ಮುಂಗಾರು ಮತ್ತು ಹಿಂಗಾರಿ ಭತ್ತ ಎರಡರಲ್ಲೂ ಕಂಡುಬರುತ್ತದೆಕೀಟದ ಪತಂಗ ಹಳದಿ ಬಣ್ಣದ್ದಾಗಿದ್ದು, ಹೆಣ್ಣಿನ ಹೊಟ್ಟೆಯ ತುದಿಯಲ್ಲಿ ಕಂದು ಬಣ್ಣದ ಬಿರುಗೂದಲಿನ ಸಮೂಹ ಮತ್ತು ಮುಂಬದಿಯ ರೆಕ್ಕಗಳಲ್ಲಿ ಒಂದೊಂದು ಕಪ್ಪು ಚುಕ್ಕೆ ಇರುತ್ತದೆ.   ಗಂಡು ಪತಂಗದಲ್ಲಿ ಕಪ್ಪು ಚುಕ್ಕೆಗಳು ಕಾಣುವುದಿಲ್ಲಹೆಣ್ಣು ಪತಂಗ ಗಂಡು ಪತಂಗಕ್ಕಿಂತ ಗಾತ್ರದಲ್ಲಿ ದೊಡ್ದದುಪತಂಗಗಳು ರಾತ್ರಿ ವೇಳೆಯಲ್ಲಿ  ದೀಪದ ಬೆಳಕಿಗೆ ಆಕರ್ಷಿಸಲ್ಪಡುತ್ತವೆತಂಪಾದ ವೇಳೆಯಲ್ಲಿ ಅಂದರೆ ಬೆಳಗಿನ ಮತ್ತು ಸಾಯಂಕಾಲದ ವೇಳೆಯಲ್ಲಿ ಭತ್ತದ ಸಸಿ ಮಡಿಗಳಲ್ಲಿ ಪೈರಿನ ಗರಿಗಳ ಮೇಲೆ ಕುಳಿತಿರುತ್ತವೆ ಮತ್ತು ಹಾರಾಡುತ್ತಿರುವ ದೃಶ್ಯವನ್ನು  ಸಹ ನೋಡಬಹುದುಬಿಸಿಲಿನ ತಾಪ ಹೆಚ್ಚಾದಂತೆಲ್ಲ ಪತಂಗಗಳು ಸಸಿಗಳ ಗರಿಗಳ ತಳಭಾಗಕ್ಕೆ ಸರಿಯುತ್ತವೆ.

ಹೆಣ್ಣು ಪತಂಗ ತನ್ನ ಮೊಟ್ಟೆಗಳನ್ನು ಗರಿಗಳ ಹಿ0ಬಾಗದ ಮೇಲ್ತುದಿಯಲ್ಲ್ಲಿ ಗುಂಪು ಗುಂಪಾಗಿಡುತ್ತದೆಒಂದು ಗುಂಪಿನಲ್ಲಿ 8-15 ಮೊಟ್ಟೆಗಳಿದ್ದುಕಂದು ಬಣ್ಣದ ಬಿರುಗೂದಲಿನ ಸಮೂಹದಿಂದ ಮುಚ್ಚಿಲ್ಪಟ್ಟಿರುತ್ತವೆಮೊಟ್ಟೆಯಿಂದ ಹೊರಬಂದ ಮರಿಕೀಡೆ ಪೈರಿನ ಕಾಂಡದ ತಳಭಾಗವನ್ನು ಕೊರೆದು ಒಳ ಸೇರುತ್ತದೆಇದರಿಂದಾಗಿ ಪೈರಿನ ತಳ ಗರಿ ಹಳದಿ ಬಣ್ಣಕ್ಕೆ ತಿರುಗಿ  ಒಣಗಿದಂತೆ ಕಾಣುತ್ತವೆ ರೀತಿ ಹಳದಿ ಬಣ್ಣಕ್ಕೆ ತಿರುಗಿದಾಗ ರೈತರು  ಸಾರಜನಕದ ಕೊರತೆ ಇರಬಹುದೆಂದು ತಪ್ಪು ತಿಳಿದು ಯೂರಿಯಾ ಹಾಕುವುದು ಸರ್ವೇ ಸಾಮಾನ್ಯಹಳದಿ ಬಣ್ಣಕ್ಕೆ ತಿಗುರಿದ  ಪ್ಶೆರನ್ನು ಕಿತ್ತು ನೋಡಿದರೆ ಕಾಂಡದ ತಳಭಾಗದಲ್ಲಿ ಸಣ್ಣ ರಂಧ್ರವಿರುತ್ತದೆ ಮತ್ತು ಹುಳು ಬಿದ್ದ ಪೈರಿನ ಸುಳಿ ಬಾಡಿ ಒಣಗುತ್ತದೆಬೆಳೆಯು ತೆನೆ ಬಿಡುವ ಅಥವಾ ತೆನೆಗಳು ಹಾಲು ತುಂಬುವ ಹಂತದಲ್ಲಿದ್ದರೆ, ಮರಿಹುಳುಗಳು ತೆನೆಯ ಬುಡವನ್ನು ಕತ್ತರಿಸುವುದರಿಂದ ಒಣಗಿ ಹೋಗುತ್ತವೆಇದನ್ನು ಬಿಳಿ ತೆನೆ ಅಥವಾ ಬೆಪ್ಪು ಒಡೆ ಎನ್ಮ್ನತ್ತಾರೆಅಂತಹ ಸುಳಿಗಳನ್ನು/ತೆನೆಗಳು ಕೈಯಿಂದ ಎಳೆದರೆ ಸುಲಭವಾಗಿ ಬರುತ್ತವೆ.

ಸಸ್ಯ ಬೆಳವಣಿಗೆ / ತೆಂಡೆಯೊಡೆಯುವ 0ತದಿ0 ಕಾಳು ಕಟ್ಟುವ 0ತದವರಗೆ ಬರುವ ಕೀಟಗಳು

ಗರಿಸುತ್ತುವ ಹುಳು / ಗರಿ ಮಡುಚುವ ಹುಳು:

                ಮುಂಗಾರು ಮತ್ತು ಬೇಸಿಗೆ ಬೆಳೆಗಳಲ್ಲಿ ಕಾಲದ ಬಾಧೆ ಕಾಣಿಸಿಕೊಳ್ಳುತ್ತದೆ. ನಾಟಿ ಮಾಡಿದ ಪೈರಿನಿಂದ ಪ್ರಾರಂಭಿಸಿ ಬೆಳೆ ಕೊಯ್ಯುಲಿನವರೆಗೂ ಕೀಟವು ಕಂಡುಬರುತ್ತದೆ. ಪ್ರಾರಂಭದಲ್ಲಿ ಎಳೆಯ ಮರಿಗಳು ಎಲೆಯ ನರಗಳ ಹಸಿರು ಭಾಗವನ್ನು ಕೆರೆದು ತಿಂದು ಬೆಳೆಯುತ್ತವೆ. ನಂತರ ಎರಡು ಅಥವಾ ಮೂರು ಎಲೆಗಳ ಅಂಚುಗಳನ್ನು ರೇಷ್ಮೇ ದಾರದಿಂದ ಅಂಟಿಸಿ, ಗೂಡಿನ ಒಳಸೇರಿ ಕೆರೆದು ತಿನ್ನುತ್ತದೆ. ಪೈರಿಗೆ ಪೈರಿನ ಗರಿಗಳನ್ನು ಕೆರೆದು ತಿಂದ ಮೇಲೆ ಮತ್ತೊಂದು ಹೊಸ ಹುಳು ವಲಸೆ ಹೋಗುತ್ತದೆ. ಹುಳುಗಳು ತಿಂದ ಭಾಗವು ಮೊದಲು ಬಿಳಿಯಾಗಿ ನಂತರ ಒಣಗಿ ಕಂದು ಬಣ್ಣಕ್ಕೆ ತಿರುಗುತ್ತದೆ.

 ಕೊಳವೆ ಹುಳು

                ಕೀಟವು ಹೆಚ್ಚು ಮಳೆ ಬೀಳುವ ಮತ್ತು ತಡವಾಗಿ ನಾಟಿ ಮಾಡಿದ ಜೌಗು ಪ್ರದೇಶಗಳಲ್ಲಿ ಕಂಡುಬರುತ್ತದೆಪತಂಗವು ಹಾಲಿನಚಿತೆ ಬಿಳುಪು, ರೆಕ್ಕೆಗಳ ಮೇಲೆ ಸಣ್ಣ ಸಣ್ಣ ಕಂದು ಮಚ್ಚೆಗಳಿರುತ್ತವೆ. ನಾಟಿ ಮಾಡಿದ 10-15 ದಿನಗಳ ನಂತರ ಮರಿಹುಳುಗಳು ಎಲೆಗಳ ತುದಿ ಭಾಗವನ್ನು ಕತ್ತರಿಸಿ ಕೊಳವೆಗಳನ್ನು  ಮಾಡಿಕೊಳ್ಳ್ಳುತ್ತವೆಮರಿಹುಳುಗಳು ಕೊಳವೆಯಿಂದ ತಲೆಯನ್ನು ಚಾಚಿ ಎಲೆಗಳ ಮೇಲ್ಭಾಗದ ಹಸಿರನ್ನು ಕೆರೆದು ತಿನ್ನುವುದರಿಂದ ಎಲೆಗಳು ಬಿಳಿಯ ಹಂದರದಂತೆ ಅಥವಾ ಏಣಿಯಂತೆ ಕಾಣುತ್ತವೆ. ಕೊಳವೆಗಳು ನೀರಿನ ಮೇಲೆ ತೇಲಾಡುತ್ತಿರುವುದು ಸರ್ವೆಸಾಮಾನ್ಯಇವು ಗಾಳಿ ಮತ್ತು ನೀರಿನ ಸಹಾಯದಿಂದ ಇತರ ಗದ್ದೆಗಳಿಗೆ ಹರಡುತ್ತವೆ.

ಕಂದು ಜಿಗಿಹುಳು

ಕೀಟವು ಭತ್ತದ ಬೆಳೆ ಹಾನಿ ಮಾಡುವಲ್ಲಿ ಮೊದಲನೇ ಸ್ಥಾನದಲ್ಲಿದೆ. 1975 ರಲ್ಲಿ ಕರ್ನಾಟಕದಲ್ಲಿ ಅದರಲ್ಲೂ ಮಂಡ್ಯ ಜಿಲ್ಲೆಯಲ್ಲಿ ಕಾಣಿಸಿಕೊಂಡ ಈರೀತಿ ಇಂದು ಕರ್ನಾಟಕದ ಎಲ್ಲಾ ಅಚ್ಚುಕಟ್ಟು ಪ್ರದೇಶಗಳಲ್ಲಿ ಕಂಡುಬರುತ್ತದೆ.   ಪ್ರೌಢಹುಳು ಮತ್ತು ಅಪ್ಸರೆಗಳು ಗಿಡದ ಬುಡದಲ್ಲಿದ್ದು ರಸ ಹೀರುತ್ತವೆನಾಟಿ ಮಾಡಿದ ಒಂದು ತಿಂಗಳಿಂದ ಹಾವಳಿ ಆರಂಭ. ಬೆಳೆಯು ಎಳೆಯದಿರುವಾಗ ಅಲ್ಪಸಂಖ್ಯೆಯಲ್ಲಿ ಕಾಣಿಸಿಕೊಂಡು ಬೆಳೆ ಬೆಳೆದಂತೆ ಕೀಟಗಳ ಸಂಖ್ಯೆ ಹೆಚ್ಚಾಗುತ್ತದೆ. ಪ್ರತಿ ಗಿಡದ ಬುಡದಲ್ಲಿ 500-600 ಹುಳುಗಳು ಕಂಡು ಬರುತ್ತವೆ. ಸೆಪ್ಟೆಂಬರ್ನಿಂದ ನವೆಂಬರ್ತನಕ ಇವುಗಳ ಸಂಖ್ಯೆ ಹೆಚ್ಚಾಗುವುದು. ಆರ್ದ್ರತೆ ಹೆಚ್ಚಿರುವ ವಾತಾವರಣ ಮತ್ತು 25-32 ಡಿಗ್ರಿ ಉಷ್ಣತಾಮಾನವು ಇವುಗಳ ಸಂತಾನಾಭಿವೃದ್ಧಿಗೆ ಪೂರಕವಾಗಿರುತ್ತದೆ. ಬೇಸಿಗೆಯಲ್ಲಿ ಇವುಗಳ ಸಂಖ್ಯೆ ತುಂಬಾ ಕಡಿಮೆ ಇರುವುದಲ್ಲದೆ ಅಕಸ್ಮಾತ್ ವೃದ್ಧಿ ಆದರೆ ಫೆಬ್ರುವರಿ ಮತ್ತು ಮಾರ್ಚ್ನಲ್ಲಿ ಮಾತ್ರ ಆಗುತ್ತದೆ.

ಭತ್ತವನ್ನೇ ಎರಡು ಮೂರು ಬೆಳೆಯಾಗಿ ಬೆಳೆಯುವುದು, ಕಂದು ಜಿಗಿಹುಳುಗಳಿಗೆ ಹೆಚ್ಚು ತುತ್ತಾಗುವ ಕೆಲವು ಭತ್ತದ ತಳಿಗಳನ್ನು ಬೆಳೆಯುವುದು, ಶಿಫಾರಸ್ಸಿಗಿಂತ ಮಿತಿಮೀರಿ ಸಾರಜನಕ ಗೊಬ್ಬರವನ್ನು ಬೆಳೆಗೆ ಕೊಡುವುದು, ವಿವೇಚನೆ ಇಲ್ಲದೆ ಕೀಟನಾಶಕಗಳ ಬಳಕೆ ಮತ್ತು ಬೆಳೆಗೆ ಹೆಚ್ಚು ನೀರು ಕೊಡುವುದು ಇವೇ ಮುಂತಾದವುಗಳಿಂದ ಕಂದು ಜಿಗಿ ಹುಳುಗಳು ಹೆಚ್ಚು ವೃದ್ಧಿಯಾಗಲು ಪ್ರಮುಖ ಕಾರಣಗಳು.

ಕೀಟಗಳು ಭತ್ತದ ಬುಡಭಾಗದಲ್ಲಿ ಕುಳಿತು ಕಾಂಡದಿಂದ ರಸಹೀರುವುದರಿಂದಾಗಿ ಮೊದಲಿಗೆ ಗರಿಗಳ ಅಂಚು ಹಳದಿಬಣ್ಣಕ್ಕೆ ತಿರುಗಿ, ಕ್ರಮೇಣ ಅಲ್ಲಲ್ಲಿ0iÉುೀ ವೃತ್ತಾಕಾರದಲ್ಲಿ ಬೆಳೆ ಸುಟ್ಟಂತಾಗುತ್ತದೆಇದನ್ನುಹಾಪರ್ ಬರ್ನ್ ಅಥವಾಜಿಗಿಸುಡು ಎಂದು ಕರೆಯುತ್ತಾರೆ ಹಾಪರ್ ಬರ್ನ್ನಿಂದಾಗಿ ಭತ್ತದ ತೆನೆಗಳಲ್ಲಿನ ಹಾಲು ನಾಶವಾಗುತ್ತದೆಕಾಳುಗಳು ಜಳ್ಳಾಗುವುದೇ ಅಲ್ಲದೆ ಹುಲ್ಲು ಸಹ ಕೊಳೆತುಹೋಗುತ್ತದೆಹುಳುವಿನ ಸಂಖ್ಯೆ ಹೆಚ್ಚಾದಾಗ ಭತ್ತದ ಬುಡಭಾಗದಲ್ಲಿ ಕಪ್ಪು ಬೂಷ್ಟು ಕಟ್ಟುತ್ತದೆಕಂದು ಜಿಗಿಹುಳುಗಳು ರಸಹೀರಿ ಬೆಳೆಯನ್ನು ಹಾಳು ಮಾಡುವುದೇ ಅಲ್ಲದೆ ಕೆಲವು ಬಗೆಯ ನಂಜು ರೋಗಗಳನ್ನು ಸಹ ಹರಡುತ್ತವೆ. ಸದ್ಯಕ್ಕೆ ಅಂತಹ ನಂಜುರೋಗಗಳ ಬಾಧೆ ನಮ್ಮ ರಾಜ್ಯದಲ್ಲಿ ಎಲ್ಲೂ ಕಂಡುಬಂದಿಲ್ಲ.

ಕಣೆನೊಣ

 ತೀರ ಪ್ರದೇಶದಲ್ಲಿ ಬೆಳೆಯುವ ಮುಂಗಾರಿನ ಬೆಳೆಗೆ ಕಾಟ ಹೆಚ್ಚುಇತ್ತೀಚಿನ ದಿನಗಳಲ್ಲಿ ತಡವಾಗಿ ನಾಟಿ ಮಾಡಿ ಮೊಡ ಕವಿದ ವಾತಾವರಣ ಮತ್ತು ತುಂತುರು ಮಳೆ ಇದ್ದಲ್ಲಿ ಕಣೆ ನೊಣದ ಬಾಧೆ ಗಣನೀಯವಾಗಿ ಕಂಡುಬರುತ್ತಿದೆ

ನಾಟಿ ಮಾಡಿದ 10-15 ದಿನಗಳ ನಂತರ ಹಾನಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಮಾಗಟ್ ಕಾಂಡ ಮತ್ತು ಗರಿಕವಚದ ನಡುವೆ ಹರಿದು ಬುಡಭಾಗವನ್ನು ಸೇರಿ, ಬೆಳೆಯುವ ಸುಳಿಯನ್ನು ಉಜ್ಜಿ ತಿನ್ನುವುದರಿಂದ ಪೈರಿನ ಸುಳಿ ಈರುಳ್ಳಿ ಎಲೆ ಆಕಾರದ ಕೊಳವೆಯಾಗಿ ಮಾರ್ಪಾಡಾಗುತ್ತದೆ. ಅಂತಹ ಪೈರಿನಿಂದ ತೆನೆ ಬರುವುದಿಲ್ಲ. ಇದಕ್ಕೆ ಕಣೆ ಅಥವಾ ಆನೆಕೊಂಬು ಎನ್ನುತ್ತಾರೆ.

ಮುಳ್ಳುಚಿಪ್ಪಿನ ದುಂಬಿ 

ಕೀಟದ ಹಾನಿಯು ಸಸಿಮಡಿಯಲ್ಲಿಯೇ ಶುರುವಾಗಿ ತೆಂಡೆಯೊಡೆಯುವವರೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಮಾಡುತ್ತದೆ. ಪ್ರೌಢಕೀಟ ಕಪ್ಪು ಮೈಮೇಲೆಲ್ಲಾ ಮುಳ್ಳಿನಾಕಾರದುಂಬಿಗಳು ಗರಿಗಳ ಪತ್ರಹರಿತ್ತನ್ನು ಕೆರೆದು ತಿನ್ನುವುದರಿಂದ ಹಾನಿಗೊಳಗಾದ ಗರಿಗಳಲ್ಲಿ ಮೊದಲು ಅಗಲವಾದ ಸಮನಾಂತರ ಗೆರೆಗಳು ಕಾಣಿಸಿಕೊಂಡು ತದನಂತರ ಗರಿಗಳು ಬೆಳ್ಳಗಾಗಿ ಒಣಗಿ ಹೋದಂತೆ ಕಾಣುತ್ತವೆ. ಮರಿಹುಳುಗಳು ಸುರಂಗ ಮಾಡುವುದರಿಂದ ಗರಿಗಳಲ್ಲಿ ಕಂದು ಮಚ್ಚೆಗಳು ಕಾಣಿಸುತ್ತವೆ

ಹಸಿರು ಕೊಂಬಿನ ಹುಳು

                ಹುಳು ಭತ್ತದ ಮೇಲೆ ಬರುವ ಚಿಟ್ಟೆ ಕೀಟವಾಗಿದೆ. ಇವುಗಳ ಮರಿ ಹುಳುಗಳು ಹಸಿರು ಬಣ್ಣವನ್ನು ಹೊಂದಿದ್ದು ತಲೆಯ ಮೇಲೆ ಎರಡು ಕೊಂಬುಗಳಿರುವುದರಿಂದ ಇವುಗಳಿಗೆ ಹಸಿರು ಕೊಂಬಿನ ಹುಳವೆ0ದು ಕರೆಯುತ್ತಾರೆ. ಮರಿಹುಳು ಎಲೆಗಳನ್ನು ಕತ್ತರಿಸಿ ತಿನ್ನುತ್ತವೆ. ಇದರಿಂದ ಬೆಳೆಯ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಇವುಗಳ ಬಾಧೆ ಸೈನಿಕ ಹುಳುವಿನ ಬಾಧೆಯನ್ನು ಹೋಲುತ್ತದೆ. ಕೀಟ ಎಲೆಯ ಎರಡು ಕಡೆಗಳಲ್ಲಿ ಅಂಗಾಂಶವನ್ನು ಮತ್ತು ಎಲೆಯ ನರಗಳನ್ನು ತಿನ್ನುತ್ತದೆ. ಇವುಗಳ ಸಂಖ್ಯೆ ತೀರ ಹೆಚ್ಚಾದಾಗ ಅಂದರೆ ಸುಮಾರು 50 ರಷ್ಟು ಗಿಡಗಳ ಮೇಲೆ ಕಂಡು ಬಂದರೆ ಮಾತ್ರ ಕೀಟ ನಾಶಕವನ್ನು ಬಳಸಬೇಕು. ಅದಲ್ಲದೆ ಅಲ್ಪ ಸ್ವಲ್ಪವಿದ್ದರೆ ಕೀಟದಿಂದ ಯಾವುದೇ ಹಾನಿ ಇರುವುದಿಲ್ಲ.

ಜಿಗಿಯುವ ಚಿಟ್ಟೆ

                ಇವುಗಳು ಮಳೆಯಾಶ್ರಿತ ಚಿತ್ರದ ಭತ್ತದ ಪರಿಸರದಲ್ಲಿ ಬಹಲ ಹೆಚ್ಚಾಗಿ ಕಂಡುಬರುವುದು. ಪ್ರಬುದ್ಧ ಮತ್ತು ಮರಿಹುಳುಗಳು ಎಲೆಯ ಮೇಲಿದ್ದುಕೊಂಡು ಎಲೆಯ ಅಂಗಾಂಶವನ್ನು ಮತ್ತು ನರಗಳನ್ನು ತಿನ್ನುತ್ತವೆ. ಕೀಟಬಾಧೆಯ ಲಕ್ಷಣಗಳು ಸುಮಾರು ಹಸಿರು ಕೊಂಬಿನ ಹುಳಬಾಧೆಯನ್ನು ಹೋಲುತ್ತದೆ. ಇವುಗಳು ಎಲೆಯ ತುದಿಯನ್ನು ಬಾಗಿಸಿ ಅಥವಾ ಎಲೆಯ ಎರಡು ಬದಿಗಳನ್ನು ಸೇರಿಸಿಕೊಂಡು ಸಣ್ಣಕೋಶವನ್ನು ಮಾಡಿಕೊಳ್ಳೂತ್ತವೆ. ವಾತಾವರಣದಲ್ಲಿನ ತೇವಾಂಶ ಮತ್ತು ಕಡಿಮೆ ತಾಪಮಾನ ಇವುಗಳ ಅಭಿವೃದ್ಧಿಗೆ ಪೂರಕವಾದ ಅಂಶಗಳು.

  ನೀಲಿ ದುಂಬಿ

                ಕೀಟವು ಮುಖ್ಯವಾಗಿ ಮಲೆನಾಡಿನಲ್ಲಿ ಮುಂಗಾರಿನಲ್ಲಿ ಹಾಗೂ ತುಂಗಭದ್ರ ಅಚ್ಚುಕಟ್ಟು ಪ್ರದೇಶದಲ್ಲಿ ಹಿಂಗಾರಿ ಭತ್ತದಲ್ಲಿ ಕಂಡು ಬರುತ್ತದೆ. ದುಂಬಿಗಳು ಬಣ್ಣ ನೀಲಿ ಇರುವುದರಿಂದ ಅದೇ ಹೆಸರನ್ನು ಅವುಗಳಿಗೆ ಇಡಲಾಗಿದೆ. ಪ್ರಬುದ್ಧ ಮತ್ತು ಮರಿಹುಳಗಳು ಎಲೆಯ ಮೇಲಿದ್ದುಕೊಂಡು ಪತ್ರಹರಿತ್ತನ್ನು ಮೇಯಿತ್ತವೆ ಇವುಗಳ ಬಾಧೆಗೊಳಗಾದ ಎಲೆಗಳ ಮೇಲೆ ಉದ್ದನೆಯ ಸಮಾನಾಂತರ ರೇಖೆಗಳು ಕಂಡುಬರುವುದು. ರೀತಿ ಬಾಧೆಗೊಳಗಾದ ಎಲೆಗಳು ಮೇಲಕ್ಕೆ ಮುದುರಿಕೊಳ್ಳೂವುದನ್ನು ಕಾಣಬಹುದು. ಮಳೆಯಾಶ್ರಿತ ಎತ್ತರದ ಭತ್ತದ ಗದ್ದೆಗಳು, ಅತಿವೃಷ್ಠಿ, ಕೀಟನಾಶಕಗಳ ದುರ್ಬಳಕೆ, ಮಿತ್ರಕೀಟಗಳು ಕಡಿಮೆ ಇರುವುದು ಮತ್ತು ಬೆಳವಣಿಗೆ ಹಚಿತದಲ್ಲಿರುವ ಬೆಳೆ ಕೀಟಗಳ ಬೆಳವಣಿಗೆಗೆ ಪೂರಕವಾದ ಅಂಶಗಳು.

ತೆನೆ ತಿಗಣೆ

 ರಾಜ್ಯದ ತೀರ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯುವ ಬೆಳೆಗೆ ಹಾನಿ ಹೆಚ್ಚುಇತ್ತೀಚಿನ ದಿನಗಳಲ್ಲಿ ಮೈದಾನ ಪ್ರದೇಶದ ಕೆಲವು ಭಾಗಗಳಲ್ಲಿಯೂ ಇವುಗಳ ಕಾಟ ಕಂಡುಬರುತ್ತಿದೆ.ಪ್ರೌಢ ಮತ್ತು ಅಪ್ಸರೆ ಕೀಟಗಳು ತೆನೆ ಹಾಲು ತುಂಬುವ ಕಾಲದಲ್ಲಿ ರಸ ಹೀರುತ್ತವೆಅಂತಹ ತೆನೆಗಳಲ್ಲಿ ಕಾಳು ಜೊಳ್ಳಾಗುತ್ತವೆ.

 

ಸಮಗ್ರ ಹತೋಟಿ ಕ್ರಮಗಳು

1. ನಾಟಿ ಮಾಡುವಾಗ ಸಸಿಗಳ ಎಲೆಯ ತುದಿಯನ್ನು ಚಿವುಟಿ ನಾಟಿಮಾಡಬೇಕು. ಇದರಿಂದ ಸಸಿಗಳ ಎಲೆಯ ತುದಿಯಲ್ಲಿಟ್ಟಿರುವ ಹುಳದ ತತ್ತಿಗಳನ್ನು ನಾಶ ಮಾಡಿದಂತಾಗುತ್ತದೆ. ಕೀಟವು ಪ್ರತಿ ವರ್ಷವೂ ಕಂಡುಬರುವ ಪ್ರದೇಶದಲ್ಲಿ ಬೆಳೆ ಕಟಾವಾದ ನಂತರ ಉಳಿದ ಬೆಳೆಯ ಅವಶೇಷವನ್ನು ಬೆಂಕಿಹಚ್ಚಿ ಸುಡಬೇಕು. ಮಾಗಿ ಉಳುಮೆ ಮಾಡುವುದರಿಂದ ಕೋಶಾವಸ್ತೆಯಲ್ಲಿರುವ ಕೀಟಗಳು ನಾಶಹೊಂದುವವು

2. ಥ್ರಿಪ್ಸ್ ಮತ್ತು  ಗರಿಜಿಗಿ ಹುಳ ಬೆಳೆಯ ಮೇಲೆ ಕಾಣಿಸಿಕೊಂಡ ತಕ್ಷಣ ಪ್ರತಿ ಲೀಟರ್ ನೀರಿಗೆ 1.0 ಮಿ.ಲೀ. ಬೇವಿನ ಎಣ್ಣೆಯನ್ನು ಅಥವಾ ಕೀಟದ ಹಾವಳಿ ತೀರ ಹೆಚ್ಚಾದಾಗ 1.5 ಮಿ.ಲೀ. ಮೊನೊಕ್ರೊಟೊಫಾಸ್ ಆಥವಾ 2.0 ಮಿ.ಲೀ.ಕ್ಲೋರೋಪೈರಿಫಾಸನ್ನು  ಒಂದು ಲೀಟರ್ ನೀರಿಗೆ ಸೇರಿಸಿ ಸಿಂಪಡಿಸಬೇಕು. ಒಂದು  ವೇಳೆ ಸಿಂಪಡಿಸಲು ಸಾಧ್ಯವಾಗದಿದ್ದರೆ, ಸಸಿಗಳ ನಾಟಿಗೆ ಇನ್ನೂ 10-12 ದಿನಗಳಿದ್ದರೆ ಪ್ರತೀ ಒಂದು ಗುಂಟೆ ಸಸಿ ಮಡಿಗೆ 300 ಗ್ರಾಂ. ಶೇ. 3 ಕಾರ್ಬೋಪುರಾನ್ ಅಥವಾ  250 ಗ್ರಾಂ. ಶೇ. 10 ಫೆÇೀರೇಟ್ ಹರಳು ರೂಪದ ಕೀಟನಾಶಕವನ್ನು ಪೈರಿಗೆ ಎರಚುವುಧು.   ಹರಳು ರೂಪದ ಕೀಟನಾಶಕಗಳನ್ನು ಕೆಸರು ಸಸಿ ಮಡಿಗೆ ಹಾಕುವಾಗ ಸ್ವಲ್ಪ  ಪ್ರಮಾಣದಲ್ಲಿ ನೀರಿದ್ದರೆ ಸಾಕು.  24 ರಿಂದ 36 ಗಂಟೆಗಳ ಕಾಲ ನೀರು ಸಸಿ ಮಡಿಗೆ ಬರುವುದು ಅಥವಾ ಹೊರ ಹೋಗದಂತೆ ಎಚ್ಚರಿಕೆ ವಹಿಸಿ.

 3. ಸಸಿಗಳನ್ನು ನಾಟಿ ಮಾಡುವ ಪೂರ್ವದಲ್ಲಿ ಕ್ಲೋರ್ಪೈರಿಫಾಸ್ 20 .ಸಿ. 2 ಮಿ.ಲೀ. ಪ್ರತಿ ಲೀಟರ್ ದ್ರಾವಣದಲ್ಲಿ ಒಂದು ರಾತ್ರಿ ಇಟ್ಟು ನಂತರ ನಾಟಿ ಮಾಡಿದಲ್ಲಿ ಪ್ರಾರಂಭಿಕ ಹಂತದ ಕೀಟಗಳನ್ನು ಹತೋಟಿ ಮಾಡಬಹುದು.

4.ಬದುಗಳ ಹಾಗೂ ನೀರು ಕಾಲುವೆಯ ಮೇಲೆ ಬೆಳೆಯುತ್ತಿರುವ ಹುಲ್ಲುಗಳನ್ನು ಇತರೇ ಸಸ್ಯಗಳನ್ನು ನಾಶ ಮಾಡಬೇಕುಇದರಿಂದ ಹುಲ್ಲುಗಳ ಮೇಲೆ ವೃದ್ಧಿಗೊಳ್ಳುವ ನುಶಿ, ಮುಳ್ಳು ಚಿಪ್ಪಿನ ದುಂಬಿ ಹಾಗೂ ಇತರ ಕೀಟಗಳನ್ನು ಕಡಿಮೆ ಮಾಡಬಹುದು

5. ಕಾಂಡ ಕೊರೆಯುವ ಹುಳದ ಹತೋಟಿಗಾಗಿ ಹೆಕ್ಟೇರಿಗೆ 20 ಲಿಂಗಾಕರ್ಷಕಗಳ ಬಲೆಗಳನ್ನು ನಾಟಿ ಮಾಡಿದ 20 ದಿನಗಳವರೆಗೆ ಉಪಯೋಗಿಸಿ ಪತಂಗಗಳನ್ನು ಆಕರ್ಷಿಸಿ ಕೊಲ್ಲುವುದು ಪರಿಣಾಮಕಾರಿ0iÉುಂದು ತಿಳಿದು ಬಂದಿದೆ

6. ಭತ್ತದ ಕಾಂಡ ಕೊರೆಯುವ ಹುಳು ಮತ್ತು ಗರಿ ಮುಡಿಸುವ ಹುಳುಗಳ ನಿಯಂತ್ರಣಕ್ಕೆ  0.3 ಮಿ.ಲೀ. 0ಡಾಕ್ಸಕಾರ್ಬ್ 14.5 ಎಸ್.ಸಿ. ಅಥವಾ 0.3 ಗ್ರಾಂ ¥sóÀÅ್ಲಬೆನ್ಡಮೈಡ್ 20 ಡಬ್ಲುಡಿಜಿ ಅಥವಾ 0.1 ಮಿ.ಲೀ. ¥sóÀÅ್ಲಬೆನ್ಡಮೈಡ್ 48 ಎಸ್.ಸಿ. ಅಥವಾ 2.0 ಮಿ.ಲೀ. ಕ್ಲೋರೋಪ್ಶೆರಿಪಾಸ್ ಅಥವಾ 2.0 ಮಿ.ಲೀ. ಕ್ವಿನಾಲಪಾಸ್ ಅಥವಾ 2.0 ಮೀ. ಪೆÇೀಸಲಾನ್ ಅಥವಾ 1.3 ಮಿ.ಲೀ ಮೊನೋಕ್ರೋಟೋಫಾಸ್ ಅಥವಾ ಔಷಧಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. ಹರಳು ರೂಪದ ಕೀಟನಾಶಕಗಳಾದಲ್ಲಿ, ಪಿಫೆರ್Çನಿಲ್ ಹರಳುಗಳನ್ನು ಪ್ರತಿ ಹೆಕ್ಟೇರಿಗೆ 1.5 ಕಿ.ಗ್ರಾಂ. ನಂತೆ ಅಥವಾ ಶೇ.3 ಕಾರ್ಬೊಫ್ಯೂರಾನ್ ಹರಳನ್ನು ಹೆಕ್ಟೇರಿಗೆ 19 ಕಿ.ಗ್ರಾಂ. ನಂತೆ ಅಥವಾ ಶೇ.4 ಕಾರ್ಟಾಫ್ ಹೈಡ್ರೋಕ್ಲೋರೈಡ್ ಹರಳುಗಳನ್ನು ಒಂದು ಹೆಕ್ಟೇರಿಗೆ 25 ಕಿ.ಗ್ರಾಂ. ನಷ್ಟು ಬಳಸಬೇಕು

7. ಗದ್ದೆಯಲ್ಲಿ ನೀರು ನಿಲ್ಲಿಸಿ ತೆಳುವಾದ ಸೀಮೆ ಎಣ್ಣೆಯ ಪೆÇರೆಯನ್ನು ಮಾಡಿ, ಹಗ್ಗವನ್ನು ತೆಂಡೆಗಳಿಗೆ ತಾಕಿಸಿ ಎಳೆಯುವದರಿಂದ ತಂಡೆಗಳ ಕೆಳಭಾಗದಲ್ಲಿ ಜೊತ್ತು ಬಿದ್ದಿರುವ ಕೊಳವೆ ಹುಳುಗಳನ್ನು ನೀರಿಗೆ ಬೀಳಿಸಿ ನಾಶಮಾಡಬಹುದು ಹಾಗೂ  ಪೈರನ್ನು ಅಲ್ಲಾಡಿಸಿದರೆ ಮುಳ್ಳುಚಿಪ್ಪಿನ ದುಂಬಿಗಳು ನೀರಿಗೆ ಬಿದ್ದು ನಾಶಹೊಂದುತ್ತವೆ.

 

ಕಂದು ಜಿಗಿಹುಳದ ಹತೋಟಿಗಾಗಿ

ನೀರು ನಿರ್ವಹಣೆ: ಕಂದು ಜಿಗಿಹುಳುಗಳ ಕಾಟವಿರುವ ಪ್ರದೇಶಗಳಲ್ಲಿ ಭತ್ತವನ್ನು ನಾಟಿಮಾಡಿದ 60 ದಿನಗಳ ನಂತರ ಬೆಳೆಗೆ ಯಾವಾಗಲು ನೀರು ಹರಿಸುವ ಬದಲು, ಭೂಮಿಯನ್ನು ಆಗಿಂದಾಗ್ಗೆ ಒಣಗಿಸಿ ನೀರು ಕೊಡುವುದು ಉತ್ತಮಇದರಿಂದ ಕಂದು ಜಿಗಿಹುಳುಗಳು ವೃದ್ಧಿಯಾಗುವುದು ಕುಂಟಿತವಾಗುತ್ತದೆ

ಕಂದು ಜಿಗಿಹುಳುಗಳ ಸ್ವಾಭಾವಿಕ ಶತ್ರುಗಳಿಗೆ ಉತ್ತೇಜನ: ಕಂದು ಜಿಗಿಹುಳುಗಳಿಗೆ ಭತ್ತದ ಪರಿಸರದಲ್ಲಿ ಅನೇಕ ಬಗೆಯ ಸ್ವಾಭಾವಿಕ ಶತ್ರುಗಳಾದ  ಹಸಿರು ತಿಗಣೆ, ಗುಲಗಂಜಿಹುಳು, ಮೀರಿಡ್ ತಿಗಣೆ, ಮೊಟ್ಟೆಗಳಲ್ಲಿನ ವಿವಿಧ ಬಗೆಯ ಪರತಂತ್ರ ಜೀವಿಗಳು, ಜಂತುಹುಳುಗಳು ಮತ್ತು ವಿವಿಧ ಬಗೆಯ ಜೇಡಗಳು 0ಡುಬರುತ್ತವೆ. ಆದ್ದರಿ0, ವಿವೇಚನೆ ಇಲ್ಲದೆ ಕೀಟನಾಶಕಗಳನ್ನು ಬಳಸಿ ಸ್ವಾಭಾವಿಕ ಶತ್ರುಗಳ ನಾಶಮಾಡದೆ ಅವುಗಳ ವೃದ್ಧಿಗೆ ಉತ್ತೇಜನ ಕೊಡುವುದು ಉತ್ತಮ.

 

ಕೀಟನಾಶಕಗಳ ಬಳಕೆ: ಭತ್ತವನ್ನು ನಾಟಿ ಮಾಡಿದ 60-70 ದಿನಗಳ ನಂತರ ವಾರಕೊಮ್ಮೆಯಾದರು ಭತ್ತದ ಗದ್ದೆಗಳಲ್ಲಿ ಕೆಲವಾರು ಕಡೆ ತೆಂಡೆಯ ಬುಡಭಾಗವನ್ನು ವೀಕ್ಷೀಸಿ ಕಂದು ಜಿಗಿಹುಳುಗಳುಗಳಿರುವುದನ್ನು ಗುರುತಿಸಬೇಕುಒಂದು ವೇಳೆ ಪ್ರತೀ ತೆಂಡೆಗೆ 5-10 ಕಂದು ಜಿಗಿಹುಳುಗಳಿದ್ದು, ಮೊದಲೆ ತಿಳಿಸಿದ ಸ್ವಾಭಾವಿಕ ಶತ್ರುಗಳ ಚಟುವಟಿಕೆ ಹೆಚ್ಚಾಗಿದ್ದರೆ, ಕೀಟನಾಶಕಗಳನ್ನು ಉಪಯೋಗಿಸುವುದು ಬೇಡಒಂದು ವೇಳೆ ಪ್ರತಿ ಭತ್ತದ ತೆಂಡೆಯಲ್ಲಿ ಕಂದುಜಿಗಿ ಹುಳುಗಳಿದ್ದು ಸ್ವಾಭಾವಿಕ ಶತ್ರುಗಳ ಸಂಖ್ಯೆ ಬಹಳ ಕಡಿಮೆ ಇದ್ದರೆ ಕೆಳಗೆ ಸೂಚಿಸಿದ ಕೀಟನಾಶಕಗಳನ್ನು ಉಪಯೋಗಿಸಿ ಕಂದು ಜಿಗಿಹುಳುಗಳನ್ನು ಹತೋಟಿ ಮಾಡಬಹುದು.

ಸಿಂಪರಣಾ ರೂಪದ ಕೀಟನಾಶಕಗಳ ಬಳಕೆ: 25.20 ಬ್ಯೂಪೆÇ್ರೀಪೆಜಿûನ್25 ಎಸ್.ಸಿ. ಅಥವಾ ಥಯೋಮೆಥಾಕ್ಸಮ್  3.60 ಗ್ರಾ0 ಅಥವಾ ಇಮಿಡಾಕ್ಲೋಪ್ರಿಡ್ 5.40 ಮಿ.ಲೀ. ಅಥವಾ 23 ಮಿ.ಲೀ. ಮೊನೊಕ್ರೋಟೋಫಾಸ್ ಅಥವಾ 36 ಮಿ.ಲೀ. ಕ್ಲೋರೋಪೈರಿಫಾಸ್ ಅಥವಾ 36 ಗ್ರಾಂ. ಕಾರ್ಬರಿಲ್ ಪುಡಿಯನ್ನು 18 ಲೀಟರ್ ನೀರಿನಲ್ಲಿ ಸೇರಿಸಿ ಸಿಂಪಡಿಸಬೇಕುಸಿಂಪರಣಾ ದ್ರಾವಣ ಭತ್ತದ ಬುಡಭಾಗಕ್ಕೆ ಬೀಳುವಂತೆ ಸಿಂಪಡಿಸಬೇಕುಎಕರೆಗೆ 300-350 ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ.

ಹರಳುರೂಪದ ಕೀಟನಾಶಕಗಳ ಬಳಕೆ: ಹರಳು ರೂಪದ ಕೀಟನಾಶಕಗಳನ್ನು ಬಳಸಿದ್ದೇ ಆದರೆ ಎಕರೆಗೆ 8 ಕೆ.ಜಿ. ಕಾರ್ಬೋಪುರಾನ್ 3 ಜಿ. ಉತ್ತಮ ಕೀಟನಾಶಕ ಉಪಯೋಗಿಸುವಾಗ ಗದ್ದೆಗಳಲ್ಲಿ ಚುಮಕು ನೀರಿದ್ದರೆ ಸಾಕುನೀರು ಒಂದು ಗದ್ದೆಯಿಂದ ಬೇರೊಂದು ಗದ್ದೆಗೆ ಕನಿಷ್ಟ 36 ಗಂಟೆಗಳ ಕಾಲ ಹರಿದಾಡಬಾರದು ಮತ್ತು ಕೀಟನಾಶಕ ಉಪಯೋಗಿಸಿದ 20 ದಿನಗಳ ನಂತರ ಕಟಾವು ಮಾಡಬೇಕುಕಾರ್ಬೊಪುರಾನ್ 3 ಜಿ. ಉಪಯೋಗಿಸಿದ್ದಲ್ಲಿ ಕಂದುಜಿಗಿ ಹುಳುಗಳ ಸ್ವಾಭಾವಿಕ ಶತ್ರುಗಳಿಗೆ ಹೆಚ್ಚು ಅಪಾಯಕಾರಿಯಲ್ಲ.

ಬೆಳೆ ಪರಿವರ್ತನೆ: ಭತ್ತವನ್ನೇ 2-3 ಬೆಳೆಯಾಗಿ ಬೆಳೆಯುವುದು ಸೂಕ್ತವಲ್ಲಭತ್ತ-ರಾಗಿ, ಭತ್ತ-ದ್ವಿದಳಧಾನ್ಯ, ಭತ್ತ-ಕಬ್ಬು ಅಥವಾ ಯಾವುದೇ ಬೇರೆ ಬೆಳೆಗಳ ಪರಿವರ್ತನೆ ಅಗತ್ಯಭತ್ತವನ್ನೇ 2 ಬೆಳೆಯಾಗಿ ಬೆಳೆಯಬೇಕೆಂದಿರುವ ರೈತರು ಜಯ, ರಾಶಿ, .ಆರ್.-20 ತಳಿಗಳ ಬದಲು ಕಂದುಜಿಗಿ ನಿರೋಧಕ ಶಕ್ತಿ ಇರುವ ತಳಿಗಳನ್ನು ಬೆಳೆಸುವುದು ಉತ್ತಮ.

ಮಿತವಾಗಿ ಸಾರಜನಕ ಗೊಬ್ಬರಗಳ ಬಳಕೆ: ಮಿತಿಮೀರಿ ಸಾರಜನಕದ ಗೊಬ್ಬರ ಬಳಸುವುದು ಬೇಡಶಿಫಾರಸ್ಸಿನಲ್ಲಿರುವಷ್ಟು ಗೊಬ್ಬರ ಬಳಕೆ ಅಗತ್ಯ ಮತ್ತು ಕಂದು ಜಿಗಿಪೀಡಿತ ಪ್ರದೇಶಗಳಲ್ಲಿ ಭತ್ತವನ್ನು ಅತಿ ಹೊತ್ತಾಗಿ ನಾಟಿ ಮಾಡುವುದು ಬೇಕಿಲ್ಲ.

ಕಂದು ಜಿಗಿಹುಳು ನಿರೋಧಕ ಭತ್ತದ ತಳಿಗಳು: ಅನೇಕ ಭತ್ತದ ತಳಿಗಳು ಕಂದು ಜಿಗಿಹುಳುಗಳ ನಿರೋಧಕ ಶಕ್ತಿಯನ್ನು ಹೊಂದಿರುತ್ತವೆಕಂದು ಜಿಗಿಪೀಡಿತ ಪ್ರದೇಶಗಳಲ್ಲಿ ಅಂತಹ ತಳಿಗಳಾದ ..ಟಿ.7575 ಮತ್ತು ..ಟಿ.8116 ಬಳಕೆ ಅಗತ್ಯ ಮತ್ತು ಸಸ್ಯಸಂರಕ್ಷಣೆಯ ಹೊಣೆಯೂ ಸಹ ಕಡಿಮೆ.

ಡಾII 
ಡಿ.ಕೆ.ಸಿದ್ದೇಗೌಡ

 
 

File Courtesy: 
ZARS,RKMP-Mandya
16
May

అగ్గి తెగులు నివారణ చర్యలు

 

File Courtesy: 
Rice Section, Acharya N G Ranga Agricultural University, Rajendranagar
16
May

అగ్గి తెగులు ఉదృతిని పెంచే కారణాలు, తెగులు వ్యాప్తి

 

File Courtesy: 
Rice Section, Acharya N G Ranga Agricultural University, Rajendranagar
16
May

అగ్గి తెగులు లక్షణాలు
File Courtesy: 
Rice Section, Acharya N G Ranga Agricultural University, Rajendranagar
4
May

ఆకు ఎండు తెగులు

File Courtesy: 
Directorate of Rice Research, Hyderabad
4
May

అగ్గి తెగులు

File Courtesy: 
Directorate of Rice Research, Hyderabad
15
Oct

दानों का मलिनीकरण

दानों का मलिनीकरण

1. ऊंची भूमि तथा तराई दोनों में चावल की कुछ किस्मों में उसका रंग फीका पडना एक प्रमुख समस्या बनती जा रही है। यह अंकुरण कम कर देता है, कोपलों के क्षय का कारण बनता है, भोसीदार दाने उत्पन्न करता है और अनाज की खपत की गुणवत्ता कम करता है।

2. विकार अलग - अलग दानों तक सीमित रह सकता है, लेकिन गंभीर मामलों में रेशिस सहित लगभग पूरा पैनिकल फीका पड़ जाता है।

File Courtesy: 
ICAR NEH, Umiam
Image Courtesy: 
Mr.Chaitanya, DRR
15
Oct

बंट

बंट

1.इस रोग में, एक इअर में कुछ दाने प्रभावित होते हैं, संक्रमण या तो आंशिक रूप से या पूरी तरह से होता है। लक्षण पहले सूक्ष्म काली धारियों के रूप में दिखाई देते हैं जो पकने पर ग्लुम्स में से बाहर आते हैं।

2. यदि संक्रमित दानों को उंगलियों के बीच कुचला जाए, तो बीजाणुओं का एक काले रंग का चूरेदार पिंड होता है। बीमारी का कारण टिल्लेशिआ बार्क्लेयाना जीव है।

File Courtesy: 
ICAR NEH, Umiam
15
Oct

पत्ती पर संकरे भूरे धब्बे

पत्ती पर संकरे भूरे धब्बे

1.यह भी एक छोटी सी बीमारी है और इसके लक्षण हैं पत्ती की धार पर भूरे रंग से लेकर गहरे रंग के रैखिक धब्बे होना। धब्बे पत्ती के आवरण, ग्लुम और तने के कुछ हिस्सों में हो सकते हैं।

File Courtesy: 
ICAR NEH, Umiam
Image Courtesy: 
http://www.insectimages.org/browse/detail.cfm?imgnum=5390516
15
Oct

पत्ती पर मैल (लीफ़ स्मट)

पत्ती पर मैल (लीफ़ स्मट)

1.यह एक छोटी सी बीमारी है और इसकी विशेषता है पत्तियों पर सूक्ष्म, सांवले, हल्के, कोणीय पैच उभरना, जो सोरि का प्रतिनिधित्व करते हैं। संवेदनशील किस्मों में, अधिक आयु की पत्तियों की पूरी सतह को फंगस लगभग पूरी तरह से घेर लेता है।

2. यह रोग एंटिलोमा ऑरिज़ी के कारण होता है, जो टेलिओस्पोर्स उत्पन्न करता है और ये कोणीय से लेकर गोलाकार तक, चिकनी दीवारों के, रंग में हल्के भूरे होते हैं।

File Courtesy: 
ICAR NEH, Umiam
Image Courtesy: 
http://www.ipmimages.org/browse/detail.cfm?imgnum=5390514
15
Oct

स्टैक बर्न

स्टैक बर्न

1. इस रोग के लक्षण कोपलों, वयस्क पौधों की पत्तियों और दानों गोल से लेकर अंडाकार गहरे भूरे सूक्ष्म धब्बों के रूप में दिखाई देते हैं, जो अक्सर बड़े धब्बे के रूप में संगठित हो जाते हैं। गंभीर मामलों में, कोपलें शिथिल हो सकती हैं और पत्तियों पर सूक्ष्म काले बिन्दु उभरते हैं, जो गोलाकार फंगस के पिंड को दर्शाते हैं। दानों पर हल्के भूरे से लेकर सफेद घाव होते हैं जो काले भूरे रंग के मार्जिन से घिरे होते हैं और गुठली का रंग फीका पड़ जाता है।

File Courtesy: 
ICAR NEH, Umiam
Image Courtesy: 
Dr. Krishnaveni, DRR
15
Oct

कृत्रिम कालिख (फॉल्स स्मट)

कृत्रिम कालिख (फॉल्स स्मट)

1.इस रोग का होना अच्छी फसल का संकेत देता है क्योंकि कृत्रिम कालिख के विकास के अनुकूल मौसम फसल के अच्छे उत्पादन के पक्ष में माना जाता है। रोग कानों पर उभरता है जहां अलग-अलग अंडाशय गोल से लेकर अंडाकार स्क्लेरोटिअल रूपों के बड़े मख़मली हरे पिंडों में तब्दील हो जाते हैं। चूंकि यह मैल के रूप में दिखाई देता है इसलिए इस रोग को कृत्रिम कालिख नाम दिया गया है। स्पिकेलेट में केवल कुछ दाने की संक्रमित होते हैं।

File Courtesy: 
ICAR NEH, Umiam
Image Courtesy: 
Dr. Krishnaveni, DRR
15
Oct

आवरण की सडन

आवरण की सडन

पहले इस रोग को मामूली बीमारी के रूप में माना जाता था, लेकिन अब यह पूर्वोत्तर क्षेत्र के चावल उगाने के कई क्षेत्रों में एक प्रमुख रूप में प्रकट होता है। पैनिकल्स को ढकने वाले पत्ते के आवरण पर भूरे रंग के अनियमित मार्जिन के रूप में धब्बे विकसित होते हैं। युवा पैनिकल पत्ते के आवरण में ही रहते हैं या केवल आंशिक रूप से उभरते हैं। दाने बगैर भरे हुए या बदरंग होते हैं। गंभीर मामलों में पैनिकल सड़ सकते हैं।

File Courtesy: 
ICAR NEH, Umiam
Image Courtesy: 
Dr. Krishnaveni, DRR
15
Oct

उद्बत्ता रोग

उद्बत्ता रोग

File Courtesy: 
ICAR NEH, Umiam
Image Courtesy: 
CRRI
15
Oct

आवरण कुम्हलाना

यह रोग वर्तमान में पूर्वोत्तर क्षेत्र में बहुत गंभीर हो गया है। यह रोग ज्यादातर पत्ती के आवरण पर धब्बे या घाव उत्पन्न करता है, जो अनुकूल परिस्थितियों के तहत पत्तियों की धार तक होते हैं। घाव लम्बे होते हैं, और भूरे सफेद केंद्र तथा भूरे लाल या बैंगनी लाल मार्जिन के साथ आयताकार होते हैं। उन्नत चरणों में घावों में स्क्लेरोशिआ बनते हैं, जो आसानी से अलग हो जाते हैं। गंभीर मामलों में, पौधे के सभी पत्ते कुम्हला जाते हैं जिसके परिणामस्वरूप पौधे की मृत्यु हो जाती है। यह एक मिट्टी जनित रोग है।

File Courtesy: 
ICAR NEH, Umiam
Syndicate content
Copy rights | Disclaimer | RKMP Policies