Best Viewed in Mozilla Firefox, Google Chrome

      ಸುಧಾರಿತ ಭತ್ತದ ತಳಿಗಳು

   ಕರ್ನಾಟಕ (ದಕ್ಷಿಣ ಮೈದಾನ ಪ್ರದೇಶ)
ಭತ್ತದ ತಳಿ ಅಬಿವೃದ್ಧಿ ವಿಭಾಗ

ವಲಯ ಕೃಷಿ ಸಂಶೋಧನಾ ಕೇಂದ್ರ

ವಿ.ಸಿ.ಫಾರಂ, ಮಂಡ್ಯ-571405

 

                   ಭತ್ತವು ಕರ್ನಾಟಕ ರಾಜ್ಯದ ನೀರಾವರಿ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿರುವ ಒಂದು ಪ್ರಮುಖ ಆಹಾರ ಬೆಳೆ. ಅಚ್ಚುಕಟ್ಟು ಪ್ರದೇಶಗಳಲ್ಲಿ ಹೆಚ್ಚು ವಿಸ್ತೀರ್ಣವನ್ನು ಹೊಂದಿರುವ ಈ ಬೆಳೆಯನ್ನು ಕೆರೆ, ಬಾವಿ ಹಾಗೂ ಮಳೆ ಆಶ್ರಯಗಳಲ್ಲೂ ಕಾಣಬಹುದು.  ರಾಜ್ಯದ ಸುಮಾರು 13.28 ಲಕ್ಷ ಹೆಕ್ಟೇರುಗಳಲ್ಲಿ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮುಗಳಲ್ಲಿ ಈ ಬೆಳೆಯನ್ನು ಬೆಳೆಯಲಾಗುತ್ತಿದ್ದು ವಾರ್ಷಿಕ ಸುಮಾರು 38.56 ಲಕ್ಷ ಟನ್‍ಗಳಷ್ಟು ಭತ್ತವನ್ನು ಉತ್ಪಾದನೆ ಮಾಡಲಾಗುತ್ತಿದೆ. ರಾಜ್ಯದ ದಕ್ಷಿ

ವಲಯ 9 (ಮಲೆನಾಡು (ಗುಡ್ಡಗಾಡು ಪ್ರದೇಶ) ಕ್ಕೆ ಶಿಫಾರಸು ಮಾಡಲಾಗಿರುವ ತಳಿಗಳು

1. ತಗ್ಗು ಪ್ರದೇಶ (ತಗ್ಗು) - ಇಂಟಾನ್, ಹೇಮಾವತಿ, ಶರಾವತಿ, ಕೆ ಹೆಚ್ ಪಿ -10 , ಪಿ ಯು ಎಂ ಬಿ-8

2. ಮಜಲು (ಮಜಲು) – ಕೆ ಹೆಚ್ ಪಿ-2 , ಐ ಇ ಟಿ-7191 , ಐ. ಇ ಟಿ-13901 ,ಕೆ ಹೆಚ್ ಪಿ-10 (ಕೆಂಪಕ್ಕಿ)

3. ಗುಡ್ಡಗಾಡು ಪ್ರದೇಶ (ಬೆಟ್ಟು) ಕೊರೆದು ಬಿತ್ತನೆ ಪ್ರದೇಶ - ಗಾಮಾ-318, ಕರಣ, ಜಯ, ಕೆ ಹೆಚ್ ಪಿ-5

4. ತಡ ಮುಂಗಾರು – ಕರಣ, ಐ ಆರ್-20.

ವಲಯ 7 ಮತ್ತು 8 ರಲ್ಲಿ ಕಾಲುವೆ ಮತ್ತು ಬಾವಿ ನೀರಾವರಿ ಇರುವ ಪ್ರದೇಶಗಳಿಗೆ ಶಿಫಾರಸು ಮಾಡಲಾಗಿರುವ ತಳಿಗಳು

ಮುಂಗಾರು ಬೆಳೆಗೆ :

  • ಐ ಆರ್-30864,
  • ಬಿ ಆರ್-2655,
  • ಜಯ,
  • ಮಂಡ್ಯ ವಿಜಯ ,
  • ಇ ಇ ಟಿ 8116 ,
  • ಐ ಇ ಟಿ 7575
  • ಕೆ ಆರ್ ಹೆಚ್-2(ಹೈಬ್ರಿಡ್),
  • ತಡ ಮುಂಗಾರು,
  • ಐ ಆರ್-20,
  • ರಾಸಿ,
  • ಮಂಗಳ,
  • ಕೆ ಆರ್ ಹೆಚ್-1

ವಲಯ 4 ಮತ್ತು ಭಾಗಶಃ ವಲಯ 6 ರ ಸವಳು ಮಣ್ಣಿಗೆ ಶಿಫಾರಸು ಮಾಡಲಾಗಿರುವ ಭತ್ತದ ತಳಿಗಳು

  • ಪ್ರಕಾಶ್ ,
  • ವಿಕಾಸ್ ,
  • ಐ.ಆರ್-30864 ,
  • ಐ.ಆರ್ 20 ,
  • ರಾಸಿ ,
  • ತೆಲ್ಲಹಂಸ ,
  • ಮಂಗಳ

ವಲಯ 5 ಮತ್ತು ಭಾಗಶಃ ವಲಯ 6 ರಲ್ಲಿ ಕೆರೆ ನೀರಾವರಿ ಆಗುವ ಪ್ರದೇಶಗಳಿಗೆ ಶಿಫಾರಸು ಮಾಡಿರುವ ತಳಿಗಳು

ಐಆರ್-30864 ,

ಪುಷ್ಪಾ ,

IR-20 ,

ರಾಸಿ ,

ತೆಲ್ಲಹಂಸ ,

ಮಂಗಳ,

ಮುಕ್ತಿ (ಸಿಟಿಹೆಚ್-1),

ಬಿಳಿಮುಕ್ತಿ (ಸಿಟಿಹೆಚ್-3) ಹೈಬ್ರಿಡ್- ಕೆಆರ್ ಹೆಚ್-2

26
Aug

ಕೆ ಆರ್ ಹೆಚ್ -2 - Variety -KRH-2

ಕೆ ಆರ್ ಹೆಚ್ -2 - Variety -KRH-2

ಕೆ. ಆರ್ ಹೆಚ್-2 ಇನ್ನೊಂದು ಮಧ್ಯಮ ಅವಧಿಯ, 130 ದಿನಗಳಲ್ಲಿ ಕಟಾವಿಗೆ ಬರುವ ಸಂಕರ ತಳಿಯನ್ನು 1996 ರಲ್ಲಿ ರಾಜ್ಯಕ್ಕೆ ಬಿಡುಗಡೆ ಮಾಡಲಾಯಿತು. ಕರ್ನಾಟಕದಲ್ಲೇ ಅತಿ ಹೆಚ್ಚು ಇಳುವರಿ ನೀಡುವ ಜಯ ತಳಿಯ 6 ಟನ್/ಹೆ. ಇಳುವರಿಗೆ ಹೋಲಿಸಿದಾಗ, ಕೆಆರ್ ಹೆಚ್-2 ಸರಾಸರಿ 7.3 ಟನ್/ಹೆ. ಇಳುವರಿ ನೀಡಿತು. ಈ ತಳಿಯನ್ನು ಐಆರ್ ಆರ್ ಐ ಯ ಸಿಎಮ್ ಎಸ್ ಸಂತತಿಯ ಐ.ಆರ್ 58025ಎ ಯನ್ನು ಸ್ಥಳೀಯವಾಗಿ ವೃದ್ಧಿಪಡಿಸಿದ ಕೆ ಎಂ ಆರ್ -3ಆರ್ ಸಂತತಿಯೊಂದಿಗೆ ಸಂಯೋಜನೆ ಮಾಡಿ ಪಡಯಲಾಯಿತು. ಈ ವೃದ್ಧಿಪಡಿಸಿದ ಸಂಕರ ತಳಿಯನ್ನು ದೇಶದ ಮೂಲೆ ಮೂಲೆಗಳಲ್ಲಿ ಮುಂಗಾರು 2000 ಕಾಲದಲ್ಲಿ ಬಿತ್ತಿ ಬೆಳೆದಾಗ ಅದು ಪ್ರಯೋಗ ನಡೆಸಿದ ಸಾಧಾರಣ ಎಲ್ಲಾ ಸ್ಥಳಗಳಲ್ಲೂ ದೇಶದಲ್ಲಿ ಲಭ್ಯವಿರುವ, ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಎಲ್ಲಾ ತಳಿಗಳಿಗಿಂತ ಹೆಚ್ಚು ಇಳುವರಿ ನೀಡಿತು. ಅದನ್ನು ಇನ್ನೂ ಹೆಚ್ಚಿನ ಪರೀಕ್ಷೆಗೊಳಪಡಿಸಿದಾಗ ಅದು ಪರೀಕ್ಷಿಸಿದ ಎಲ್ಲ ಪ್ರದೇಶಗಳಲ್ಲೂ ಅಲ್ಲಿನ ಸ್ಥಳೀಯ ತಳಿಗಳಿಂದ 1.2 to 1.5 ಟ/ಹೆ. ನಷ್ಟು ಅಧಕ ಇಳುವರಿ ನೀಡಿದೆ. ಆದುದರಿಂದ ಈ ತಳಿಯ

26
Aug

ತಳಿ ಕೆ ಆರ್ ಹೆಚ್-1 - Variety -KRH-1

ತಳಿ ಕೆ ಆರ್ ಹೆಚ್-1 - Variety -KRH-1

ಕೆ ಆರ್ ಹೆಚ್ -1ತಳಿಯು ಕಡಿಮೆ ಅವಧಿಯ, ಸಂಕರಣ ತಳಿಯಾಗಿದ್ದು, ಅದು 120 ದಿನಗಳಲ್ಲಿ ಪ್ರಬುದ್ಧತೆಗೆ ಬರುತ್ತದೆ. ಈ ತಳಿಯನ್ನು ಕರ್ನಾಟಕ ರಾಜ್ಯಕ್ಕೆಂದು 1994ರಲ್ಲಿ ಬಿಡುಗಡೆ ಮಾಡಲಾಯಿತು. ಅದು ಸ್ಥಳೀಯ ತಳಿಯಾದ ಮಂಗಳದಲ್ಲಿ ಬರುವ 5.0 ಟ/ಹೆ ಗಿಂತ ಹೆಚ್ಚು, ಅಂದರೆ, ಸರಾಸರಿ 6.3 ಟನ್/ಹೆ ಇಳುವರಿ ಕೊಡುತ್ತದೆ. ಇದು ಸ್ಥಳೀಯ ತಳಿ ಯ ಇಳುವರಿಗಿಂತ 1.3 ಟನ್/ಹೆ ನಷ್ಟು ಹೆಚ್ಚಿದೆ. ಈ ತಳಿಯನ್ನು ಬೆಳೆಸುವ ವಿಧಾನವು ಪ್ರಮಾಣೀಕರಿಸಲ್ಪಟ್ಟಿದೆ. ಮುಖ್ಯ ಅಂಶಗಳೆಂದರೆ, ಒಂದು ದಿನ್ನೆಯಲ್ಲಿ ಒಂದು ಸಸ್ಯವನ್ನು ನಾಟಿ ಮಾಡುವುದು ಮತ್ತು ಸಸಿಗಳ ನಡುವೆ 20 x 10 ಸೆಂ.ಮೀ ಮತ್ತು 15 x 10 ಸೆಂ. ಮೀ ಅಂತರ ಕಾಪಾಡಿಕೊಳ್ಳುವುದು; ಸಾರಜನಕ ರಂಜಕ ಮತ್ತು ಪೊಟ್ಯಾಶ್ ಗಳನ್ನು 100:50:50 ಕೆ.ಜಿ/ಹೆ. ಪ್ರಮಾಣದಲ್ಲಿ ಒದಗಿಸವುದು, ಹಾಗೂ ಇತರ ಅಧಿಕ ಇಳುವರಿ ನೀಡುವ ತಳಿಗಳಿಗೆ ಶಿಫಾರಸು ಮಾಡಿದ ಪದ್ಧತಿಗಳನ್ನು ಅನುಸರಿಸುವುದು.

26
Aug

ತಳಿ ಕೆ ಪಿ ಹೆಚ್-5 - Variety - KPH-5

ತಳಿ ಕೆ ಪಿ ಹೆಚ್-5 - Variety - KPH-5

1. ಅವಧಿ (ದಿನಗಳು) - 145-150

2. ಭತ್ತದ ಗುಣಗಳು (ಕಾಳಿನ ವಿಧ) – ಮಧ್ಯಮ, ದಪ್ಪ.

3. ಸಸ್ಯಕ್ಷೇತ್ರದಲ್ಲಿ ಬಿತ್ತನೆ ಮಾಡುವ ಕಾಲ – ಜೂನ್ ತಿಂಗಳ ಮೊದಲ ವಾರಕ್ಕಿಂತ ಮೊದಲು

4. ಇಳುವರಿ (ಕ್ವಿಂ.ಹೆ) - 40 ರಿಂದ 43

26
Aug

ತಳಿ- ಕರಣ - Variety – Karana

ತಳಿ- ಕರಣ - Variety – Karana

1. ಅವಧಿ (ದಿನಗಳು) - 140-145

2. ಭತ್ತದ ಗುಣಗಳು (ಕಾಳಿನ ವಿಧ) – ಮಧ್ಯಮ, ತೆಳ್ಳನೆಯ

3. ಸಸ್ಯಕ್ಷೇತ್ರದಲ್ಲಿ ಬಿತ್ತನೆ ಮಾಡುವ ಕಾಲ – ಮೇ ತಿಂಗಳ ಎರಡನೆಯ ಹದಿನೈದು ದಿನಗಳು

4. ಇಳುವರಿ (ಕ್ವಿಂ.ಹೆ) - 35 ರಿಂದ 38

26
Aug

ತಳಿ- ಗಾಮಾ-318 - Variety - Gama-318

ತಳಿ- ಗಾಮಾ-318 - Variety - Gama-318

1. ಅವಧಿ (ದಿನಗಳು) - 135-140

2. ಭತ್ತದ ಗುಣಗಳು (ಕಾಳಿನ ವಿಧ) - ದಪ್ಪ

3. ಬಿತ್ತನೆಯ ಅವಧಿ – ಮೇ ತಿಂಗಳ ಮೂರನೇ ವಾರದಿಂದ

4. ಇಳುವರಿ(ಕ್ವಿಂ.ಹೆ) - 35 ರಿಂದ 38

Copy rights | Disclaimer | RKMP Policies