Best Viewed in Mozilla Firefox, Google Chrome

ಬಿಳಿ ಬೆನ್ನಿನ ಮಿಡತೆ - Whitebacked planthopper

PrintPrintSend to friendSend to friend

ಬಿಳಿ ಬೆನ್ನಿನ ಮಿಡತೆ - Whitebacked planthopper

ವೈಜ್ಞಾನಿಕ ಹೆಸರು - ಸಾಗಟೆಲ್ಲಾ ಫರ್ಸಿಫೆರಾ

ಆದೇಶ - ಡೆಲ್ಫಾಸಿಡೇ

ಕುಟುಂಬ - ಹೆಮಿಪ್ಟೆರಾ

ಬಿಳಿ ಬೆನ್ನಿನ ಮಿಡತೆಯ ಧಾಳಿಯ ಲಕ್ಷಣಗಳು - Symptom of attack of Whitebacked planthopper

1. ಹೆಚ್ಚಿನ ಸಂಖ್ಯೆಯಲ್ಲಿ ಕೀಟಗಳು ಧಾಳಿ ಮಾಡಿದಾಗ ಸಸ್ಯದ ಹೊರಗಿನ (hill) ಎಲೆಗಳು ಸುಟ್ಟ ಲಕ್ಷಣಗಳನ್ನು ತೋರಿಸುತ್ತದೆ.

2. ಭತ್ತದ ಗದ್ದೆಗಳಲ್ಲಿನ ಮಿಡತೆಗಳ ಸುಟ್ಟ ಹಾನಿಯು ಸಮಾನವಾಗಿ ಹಂಚಿಹೋಗಿದ್ದರೆ, ಬಿ ಹೆಚ್ ಪಿ ಯಲ್ಲಿ ವರ್ತುಲಾಕಾರದ ಮಚ್ಚೆಗಳಂತೆ ಅಲ್ಲಲ್ಲ ಕಾಣಿಸಿಕೊಳ್ಳುತ್ತವೆ.

ಬಿಳಿ ಬೆನ್ನುಮಿಡತೆಯ ಹಾನಿಯ ಸ್ವರೂಪ - Nature of damage of Whitebacked planthopper

ಈ ಮಿಡತೆಯು ಭತ್ತದ ಕೃಷಿಯ ಆರಂಭದ ಹಂತದಲ್ಲಿ, ವಿಶೇಷವಾಗಿ ಸಸ್ಯಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳತ್ತದೆ. (ಇದು ನೀರು ನಿಂತ ಜಮೀನಿನಲ್ಲಿ ನಾಲ್ಕು ತಿಂಗಳೊಳಗಿನ ಸಸಿಗಳ ಮೇಲೆ ಧಾಳಿ ಮಾಡುತ್ತದೆ ಅಲ್ಲದೆ ಬೆಳೆಯ ವಯಸ್ಸು ಹೆಚ್ಚದಂತೆ ಇದರ ಉಪಠಳವೂ ಹೆಚ್ಚಾಗುತ್ತದೆ. ಬೂಟಿಂಗ್ ಹಂತ ಹಾಗೂ ಹೆಡಿಂಗ್ ಹಂತಕ್ಕಿಂತ ತೆಂಡೆ ಹೊಡೆಯುವ ಸಮಯದಲ್ಲಿ ಭತ್ತವು ಈ ರೋಗಕ್ಕೆ ತುತ್ತಾಗುವುದು ಹೆಚ್ಚು. ಆಹಾರ ಸೇವನೆ ಹಾಗೂ ಮೊಟ್ಟೆಯಿಡುವುದರಿಂದ ಹಾನಿಯುಂಟಾಗತ್ತದೆ . ಮೊಟ್ಟೆಯಿಂದ ತುಂಬಿದ ಹೆಣ್ಣು ಕೀಟಗಳು ಮೊಟ್ಟೆಯಿಡಲೋಸುಗ ಎಲೆಕವಚದಲ್ಲಿ ರಂಧ್ರಗಳನ್ನು ಕೊರೆಯುತ್ತವೆ. ಪ್ರಬುದ್ಧ ಹಾಗೂ ಎಳೆಯ ಕೀಟಗಳೆರಡೂ ಫ್ಲೋಯೆಮ್ ನ ಸಾರವನ್ನು ಹೀರುವುದರಿಂದ ಸಸ್ಯದ ಶಕ್ತಿ, ಕುಂಠಿತ ಬೆಳವಣಿಗೆ, ಎಲೆಗಳ ಹಳದಿಯಾಗುವಿಕೆ ಹಾಗೂ ತೆಂಡೆಹೊಡೆಯುವ ಹಾಗೂ ಕಾಳು ಕಟ್ಟುವ ಪ್ರಕ್ರಿಯೆಯಲ್ಲಿ ತಡ/ನಿಧಾನವಾಗುವಿಕೆ, ಹಾಗೂ ಇವುಗಳಿಗೆ ಕಾರಣವಾಗತ್ತವೆ(ಭತ್ತದ ಬೆಳ ಸಂಪರ್ಣ ಕಾಳು ಉತ್ಪನ್ನಮಾಡುವಲ್ಲಿ ಸೋಲುತ್ತವೆ. (ಕಾಳಿಲ್ಲದ ತೆನೆ).ಈ ಸ್ಥಿತಿಯನ್ನು ಮಲೇಶಿಯಾದಲ್ಲಿ ಕೆಂಪು ರೋಗವೆಂದು ಕರೆಯುತ್ತಾರೆ. ಆಹಾರ ಸೇವನೆಗೆ ಮತ್ತು ಮಟ್ಟೆ ಇಡಲು ಕೊರೆದ ತೂತುಗಳು ಮತ್ತು ಗಾಯಗಳಿಂದ ಸಸ್ಯವು ಇತರ ರೋಗಳಿಗೆ ತುತ್ತಾಗುತ್ತದೆ. ಹನಿಡ್ಯೂವಿನ ಸ್ರವಿಸುವಿಕೆಯಿಂದ ಕಪ್ಪ ಶಲೀಂದ್ರದ ಬಳವಣಗೆಗೆ ಅನುಕೂಲವಾಗುತ್ತದೆ. ಅದು ಯಾವುದೇ ವೈರಸ್ ರೋಗಾಣುವಿನ ವಾಹಕವಲ್ಲ.

ಬಿಳಿ ಬೆನ್ನು ಮಿಡತೆಯ ಜೀವನ ಹಂತಗಳು - Life stages of Whitebacked planthopper

1. ಮೊಟ್ಟೆ: ಸಣ್ಣ ಭತ್ತದ ಸಸಿಗಳಲ್ಲಿ ಗುಂಪಾಗಿಯೂ, ದೊಡ್ಡದಾದ ಸಸಿಗಳಲ್ಲಿ ಮೇಲ್ಭಾಗದಲ್ಲೂ ಕೊಳವೆಯಾಕೃತಿಯ ಮೊಟ್ಟೆಗಳನ್ನು ಇಡಲಾಗುತ್ತದೆ. (ಮೈಕ್ರೋಪೈಲಾರ್ ಕೊನೆಗಳು ಅಂಗಾಂಷಗಳಿಂದ ಹೊರಡುವಂತೆ, ಇಡಲಾಗುತ್ತದ. ಒಪೆರ್ಕ್ಯುಲಮ್ ಸಪೂರನೆ, ಉದ್ದನಾಗಿರುತ್ತದೆ. ಗುಂಪಲ್ಲಿರುವ ಮೊಟ್ಟೆಗಳು ಹೆಣ್ಣು ಹುಳಗಳು ಸ್ರವಿಸುವ ದ್ರವದಲ್ಲಿ ಅಂಟಿಕೊಂಡಿರುವುದಿಲ್ಲ.)

2. ಮರಿ: ಬಿಳಿ ಅಥವಾ ಕಡು ಕಂದು ಅಥವಾ ಕಪ್ಪು-ಬಿಳಿ ಬಣ್ಣದವುಗಳಾಗಿದ್ದು, ಎಳೆಯದಿರುವಾಗ 0.6 ಮಿ.ಮೀ ಗಾತ್ರವಿರುತ್ತದೆ. ಐದನೇ ಇನ್ಟಾರ್ ಹಂತದಲ್ಲಿ ಸಪೂರನೆಯ ತಲೆ, ಹಾಗೂ ಬಿಳಿ/ ತಿಳಿ ಹಳದಿ ಬಣ್ಣದಿಂದ ದೇಹದಿಂದ ಕೂಡಿರುತ್ತದೆ. ಹೊಟ್ಟೆ ಹಾಗೂ ಎದೆಯ ಮೇಲ್ಭಾಗದಲ್ಲಿ ಬಿಳಿ ಮತ್ತು ಬೂದು ಬಣ್ಣದ ರಚನೆಗಳು ಕಾಣಿಸಿಕೊಳ್ಳುತ್ತವೆ.

3. ಪ್ರೌಢ ಕೀಟ : ಪ್ರೌಢ ಕೀಟವು 3.5-4.0 ಮಿ.ಮೀ ಉದ್ದವಿರುತ್ತದೆ. ಎದುರಿನ ರೆಕ್ಕೆಗಳು ಸಂಪೂರ್ಣವಾಗಿ ತಿಳಿಯಾಗಿದ್ದು ಕಡುಬಣ್ಣದ ನರಗಳು ಇರುತ್ತವೆ. ಎರಡು ರೆಕ್ಕೆಗಳು ಸೇರುವಲ್ಲಿ ಎದ್ದುಕಾಣುವ ಬಿಳಿ ಬಣ್ಣದ ಪಟ್ಟಿ ಇರುತ್ತದೆ. ಮ್ಮ್ಯಾಕ್ರೊಪ್ಟರಸ್ ಗಂಡು ಹುಳ ಮತ್ತು ಹೆಣ್ಣು ಹುಳ ಮತ್ತು ಬ್ರಾಕಿಪ್ಟರಸ್ ಹೆಣ್ಣು ಹುಳಗಳು ಗದ್ದೆಗಳಲ್ಲಿ ಸಾಮನ್ಯವಾಗಿ ಕಾಣಸಿಗುತ್ತವೆ.

File Courtesy: 
ZARS, Mandya
Copy rights | Disclaimer | RKMP Policies