Best Viewed in Mozilla Firefox, Google Chrome

ಕಂದು ಸಸ್ಯ ಮಿಡತೆ/ ಫಲ್ಗೊರಿಡ್‌ - Brown Plant hopper/ Fulgorid

PrintPrintSend to friendSend to friend

ಕಂದು ಸಸ್ಯ ಮಿಡತೆ/ ಫಲ್ಗೊರಿಡ್‌ - Brown Plant hopper/ Fulgorid

ವೈಜ್ಞಾನಿಕ ಹೆಸರು - ನಿಲಪರ್ವಟ ಲುಗೆನ್ಸ್

ಆದೇಶ - ಡೆಲ್ಫಾಸಿಡೇ

ಕುಟುಂಬ - ಹೆಮಿಪ್ಟೆರಾ

ಕಂದು ಮಿಡತೆಯ ಧಾಳಿಯ ಲಕ್ಷಣಗಳು - Symptom of attack of Brown Plant hopper

ಆರಂಭದ ಹಂತದಲ್ಲಿ, ಯಾವುದೇ ಲಕ್ಷಣಗಳು ಹೊರನೋಟಕ್ಕೆ ಕಾಣಿಸಿಕೊಳ್ಳುವುದಿಲ್ಲ.ಆದರೆ ನಾವು ಜಮೀನಿನೊಳಕ್ಕೆ ಹೊಕ್ಕು ಸಸ್ಯಗಳಿನ್ನು ಮೆತ್ತಗೆ ತಟ್ಟಿದರೆ ಅಸಂಖ್ಯಾತ ಕೀಟಗಳು ಕಾಣಿಸಿಕೊಳ್ಳುತ್ತವೆ. ಇವುಗಳು ಹಾನಿ ತೀವ್ರವಾದಾಗ ಮಾತ್ರ ಕಾಣಿಸುತ್ತವೆ, ಗಿಡಗಳು ಸುಟ್ಟಂತೆ ಕಾಣುತ್ತವೆ. ಮಿಡತೆಗಳು ವರ್ತುಲಾಕಾರದ ಸುಟ್ಟ ಲಕ್ಷಣವನ್ನು ಹೊರಹಾಕುತ್ತವೆ.

ಕಂದುಮಿಡತೆ ಮಾಡುವ ಹಾನಿ - Nature of damage of Brown Plant hopper

ಮರಿ ಮತ್ತು ಬೆಳೆದ ಕೀಟಗಳೆರಡೂ ಭೂಮಟ್ಟದಲ್ಲೆ ಇದ್ದು ಸಸಿಯ ರಸವನ್ನು ಹೀರುವವು. ಇದು ನಾಳಗಳಿಂದ ರಸ ಹೀರುವ ಕೀಟ. ಮುಖ್ಯವಾಗಿ ಫ್ಲೋಯಮ್‌ ನಾಳದಿಂದ ರಸ ಹೀರಿ ಸಸಿಯನ್ನು ಸುಟ್ಟಹಾಗೆ ಮಾಡುವುದು. ಮೊದಲ ಹಂತದ ಸೊಂಕಿನಲ್ಲಿ ದುಂಡನೆಯ ಹಳದಿ ಕಲೆಗಳು ಕಾಣುವವು. ಸಸಿಗಳು ಒಣಗಿದಂತೆ ಕಂದುಬಣ್ಣಕ್ಕೆ ತಿರುಗುವವು. ಸೋಂಕಿನ ಈ ಕುರುಹುಗಳು ಪೂರ್ತಿ ಹೊಲವನ್ನೆ ವ್ಯಾಪಿಸುವವು. ಅದರಿಂದ ಕಾಳು ಕಟ್ಟುವಿಕೆ ಕುಂಠಿತವಾಗುವುದು ಅದು ಸತತ ತಿನ್ನುತ್ತಿರುವಾಗ ಹೆಚ್ಚಿನ ಪ್ರಮಾಣದ ಲೋಳೆಯನ್ನು ಹೊರಹಾಕುವುದು. ಇದು ಸಸಿಯನ್ನು ಸೊರಗಿಸುವ, ಒಣಗಿಸುವ ಹಾಗೂ ಮುದುಡಿಸುವ ವೈರಸ್‌ಗಳ ವಾಹಕವಾಗಿದೆ. (ಇದರ ಹರಡುವಿಕೆಗೆ ಹೆಚ್ಚು ಸಮಯ ಅಗತ್ಯ. ಕಾಂಡ ಕೊಳೆಯುವ ಸಂಭವ ಈ ಕೀಟಗಳಿಂದ ಹೆಚ್ಚು.)

ಕಂದು ಮಿಡತೆಯ ಜೀವನ ಹಂತಗಳು - Life stages of Brown Plant hopper

ಮೊಟ್ಟೆ: ಮೊಟ್ಟೆಗಳನ್ನು 2 ರಿಂದ 12 ರ ಗುಂಪುನಲ್ಲಿ ಎಲೆಯ ಹೊರ ಕವಚದಲ್ಲಿ ಇಡುವುದು ( ಸಸ್ಯದ ಬುಡದ ಬಳಿ ಇರುವ ದಳಗಳಲ್ಲಿಡುವುದು) ಬಿಳಿಯ ಪಾರದರ್ಶಕ, ಸಿಲಿಂಡರಾಕಾರದ ಮೊಟ್ಟೆಗಳನ್ನುಎರಡುಸಾಲಿನಲ್ಲಿ ಇಡುವುದು (ಅವನ್ನು ಗುಮ್ಮಟಾಕಾರದ ಮೊಟ್ಟೆಯ ಆವರಣವನ್ನು ಹೆಣ್ಣು ಮಿಡತೆ ಸುರಿಸಿರುವುದು. ಅದರ ತುದಿ ಮಾತ್ರ ಎಲೆಯ ಮೇಲ್ಮೈನಿಂದ ಹೊರಚಾಚಿರುವುದು )

ಮರಿ: ಅದೇ ತಾನೆ ಬಂದ ಮರಿಯು ಹತ್ತಿಯಂತೆ ಬಿಳಿಯಾಗಿರುವುದು, 0.6 ಮಿ.ಮೀ ಉದ್ದವಿರುವುದು ಮತ್ತು ಐದನೆ ಹಂತದಲ್ಲಿನ 3.0 ಮಿ.ಮೀ ಬೆಳೆದು ನೇರಳೆ ಕಂದುಬಣ್ಣಕ್ಕೆ ತಿರುಗುವುದು.

ಪ್ರೌಢ ಕೀಟ : ಪ್ರೌಢ ಕೀಟವು 4.5-5.0 ಮಿ.ಮೀ ಉದ್ದವಿರುವುದು ಮತ್ತು ಹಳದಿಮಿಶ್ರಿತ ಕಂದುವಬಣ್ಣದ್ದಾಗಿರುವುದು. ಅದರ ರೆಕ್ಕೆಗಳು ಹಳದಿ ಬಣ್ಣದವು ಅಥವಾ ತಿಳಿ ಬಣ್ಣದವು. ಇದರ ರೆಕ್ಕೆಗಳಲ್ಲಿ ಎರಡು ಲಕ್ಷಣಗಳಿವೆ. ಉದ್ದನೆಯ ಮತ್ತು ಕಿರು ಅಕಾರ.(ಇದರ ರೆಕ್ಕೆಗಳ ರಚನೆಯು ವಿವಿಧ ಅಂಶಗಳನ್ನು ಅವಲಂಬಿಸಿದೆ. ಮರಿಗಳಾಗಿದ್ದಾಗ ದಟ್ಟವಾಗಿರುವುದು, ಆಹಾರದ ಪ್ರಮಾಣ ಮತ್ತು ಗುಣ ಮಟ್ಟದ ಕೊರತೆ, ಕಡಿಮೆ ಹಗಲಿನ ಅವಧಿ ಮತ್ತು ಕಡಿಮೆ ಉಷ್ಣತೆಗಳು ಪರಿಣಾಮ ಬೀರುವವು.)

ಬಿಳಿ ಬೆನ್ನಿನ ಮಿಡತೆ: ಸೊಗಟೆಲ್ಲಾ ಫರ್ಸಿ ಫೆರಾ, ಡೆಲ್ಫಸಿಡೇ, ಹೆಮಿಪ್ಟೆರಾ

File Courtesy: 
ZARS, Mandya
Copy rights | Disclaimer | RKMP Policies