Best Viewed in Mozilla Firefox, Google Chrome

ಮೀಲಿ ತಿಗಣೆ - Mealy bug

PrintPrintSend to friendSend to friend

ಮೀಲಿ ತಿಗಣೆ - Mealy bug

ವೈಜ್ಞಾನಿಕ ಹೆಸರು - ಬ್ರಿವೆನ್ನಿಯಾ ರೆಹಿ

ಆದೇಶ - ಸೂಡೋಕೊಕ್ಸಿಡ

ಕುಟುಂಬ - ಹೆಮಿಪ್ಟೆರಾ

ಮೀಲಿ ಹೇನುಗಳ ಧಾಳಿಯ ಲಕ್ಷಣ - Symptom of attack of Mealy bug

ಸಸಿ ನಾಟಿಮಾಟಿದ ಒಂದು ಅಥವಾ ಎರಡು ತಿಂಗಳಿನ ನಂತರ ಕೀಟ ಭಾದೆಯು ಕಾಣುವುದು. ಕುಂಠಿತಗೊಂಡ ವೃತ್ತಾಕಾರದ ಬಾಗಗಳು ಗದ್ದೆಯಲ್ಲಿ ಕಾಣಸಿಗುವವು. ಈ ರೀತಿಯ ಸಸಿಗಳನ್ನು ಕಿತ್ತು ನೋಡಿದರೆ ಸಸಿಯ ಎಲೆಯ ಮತ್ತು ಗರಿಯ ಮೇಲೆ ಕೀಟಗಳು ಕಾಣುವವು.

ಮೀಲಿ ಹೇನುಗಳ ಹಾನಿಯ ವಿಧ - Nature of damage of Mealy bug

ಕೀಟಗಳು ಹೆಚ್ಚಾಗಿ ಎಲೆಯ ಗರಿಯೊಳಗೆ ಇದ್ದು ಸಸಿಯ ರಸ ಹೀರುವವು.ಬಾಧಿತ ಸಸಿಗಳು ಸೊರಗಿಹೋಗಿಹಳದಿಬಣ್ಣಕ್ಕೆ ತಿರುಗಿ ಎಲೆಗಳು ಮುದುರುವವು. ದಾಳಿಯು ತೀವ್ರವಾದಾಗ ತೆನೆ ಬರುವುದನ್ನು ತಡೆಯುವುದು.ಈ ರೋಗವನ್ನು ತಮಿಳುನಾಡಿನಲ್ಲಿ ಸೂರೈರೋಗ ಎನ್ನುವರುಇದು ಸೆಪ್ಟೆಂಬರ್‌ ತಿಂಗಳಿನಿಂದ ಪ್ರಾರಂಭವಾಗುವುದು. ಇದರಿಂದ 50%. ಗೂ ಹೆಚ್ಚು ಹಾನಿ ಸಂಭವಿಸುವುದು

ಮೀಲೀ ಹೇನಿನ ಜೀವನ ಹಂತ - Life stages of Mealy bug

ಮೊಟ್ಟೆ : ಹೆಣ್ಣು ಅನೇಕ ಬಿಳಿ ಹಳದಿ ಮೊಟ್ಟೆಗಳನ್ನು ಮರಿಗಳನ್ನು ಎಲೆಯ ಹೊರಬಾಗದಲ್ಲಿ ಇಡುವವು

ಮರಿಗಳು: ಹೊಸದಾಗಿ ಹೊರಬಂದ ಮರಿಗಳು ಒಳಗೆ ಇರುವ ಅಂಟಾದ ಪದಾರ್ಥದಲ್ಲಿ 6-10 ದಿನ ಇರುವವು. ನಂತರ ಸಸ್ಯದ ವಿವಿಧ ಬಾಗಗಳಿಗೆ ಹರಡುವವು .ಹಳದಿ ಬಣ್ಣದ ಮರಿಗಳು ಬಹು ಚುರುಕು. ಸಸಿಯಮೇಲೆ ಹರಿದಾಡಿ ಅದರ ಕಾಂಡದ ಮೇಲೆ ಕುಳಿತುಕೊಳ್ಳುವುದು. ಒಂದು ದಿನದ ನಂತರ ಅದು ಕಡು ಹಸಿರು ಬಣ್ಣಕ್ಕೆ ತಿರುಗುವುದು. ಅದರ ದೇಹವನ್ನು ಎರಡನೆ ದಿನ ಮೇಣದ ರೀತಿಯ ವಸ್ತುವು ಆವರಿಸುವುದು.

ವಯಸ್ಕ ಮಿಡತೆ:ಮರಿ ಮತ್ತು ಬೆಳೆದ ಮಿಡತೆಗಳು ಒಂದೆ ರೀತಿಯಾಗಿ ಕಾಣುತ್ತವೆ. ಹೆಣ್ಣುಗಳು ಕೆಂಪಾಗಿ, ಮೃದುವಾಗಿ. ಅಂಡಾರದಲ್ಲಿರುವುದು. ಎಲೆಯ ಮುಚ್ಚಿದ ಬಾಗದಲ್ಲಿ ಗುಂಪಾಗಿ ಇರುವುದು . ಗಂಡುಗಳು ಚಿಕ್ಕದಾಗಿ , ನಾಜೂಕಾಗಿ ತಿಳಿ ಹಳದಿಬಣ್ಣದ ಒಂದೆ ಜತೆ ರೆಕ್ಕೆಗಳನ್ನು ಹೊಂದಿರುವವು. ಬಾಯಿಯಲ್ಲಿ ಬೆಳೆದ ಭಾಗಗಳಿಲ್ಲ . ಅವುಗಳ ಸಮೂಹದಲ್ಲಿ ಗಂಡು ಇರುವುದಿಲ್ಲ. ಆದುದರಿಂದ ವಂಶಾಭಿವೃದ್ಧಿಯು ಪಾರ್ತಿನೋಜೆನೆಟಿಕ್‌ ವಿಧಾನದಿಂದ ಆಗುವುದು.

File Courtesy: 
ZARS, Mandya
Copy rights | Disclaimer | RKMP Policies