Best Viewed in Mozilla Firefox, Google Chrome

ಇಯರ್‌ ಹೆಡ್‌ ಹೇನು / ಗುಂಡಿ ಹೇನು - Earhead bug/ Gundhi bug

PrintPrintSend to friendSend to friend

ಇಯರ್‌ ಹೆಡ್‌ ಹೇನು / ಗುಂಡಿ ಹೇನು - Earhead bug/ Gundhi bug

ವೈಜ್ಞಾನಿಕ ಹೆಸರು - ಲೆಪ್ಟೊಕೊರ್ಸಿಯಾ ಅಕ್ಯೂಟಾ

ಆದೇಶ - ಅಲೈಡಿಡೇ

ಕುಟುಂಬ - ಹೆಮಿಪ್ಟೆರಾ

ಗುಂಡಿ ಹೇನಿನ ಧಾಳಿಯ ಲಕ್ಷಣಗಳು - Symptom of attack of Earhead bug/ Gundhi bug

ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ತುದಿಯಿಂದ ಕೊನೆಗೆ ತುಕ್ಕು ಹಿಡಿದ ಬಣ್ಣಕ್ಕೆ ತಿರುಗುತ್ತವೆ. ಆಹಾರ ಸೇವನೆಯ ಸ್ಥಳದಲ್ಲಿ ಅಸಂಖ್ಯಾತ ಕಂದು ಚುಕ್ಕೆಗಳು ಕಾಣಿಸಿಕೊಳ್ಳುವುದು/ ಕಾಳುಗಳು ಸುರುಟಿಕೊಳ್ಳುವುದು. ಹೆಚ್ಚಿನ ಧಾಳಿಯಾದಲ್ಲಿ ಸಂಪೂರ್ಣ ತೆನೆಯಲ್ಲಿ ಕಾಳೇ ಇಲ್ಲದಾಗಬಹುದು. ಇದರ ಇರುವಿಕೆ ಕಡು ವಾಸನೆಯಿಂದ ಸೂಚಿಸಲ್ಪಡುತ್ತದೆ.

ಗುಂಡಿ ಹೇನಿನಿಂದಾಗುವ ಹಾನಿಯ ಸ್ವರೂಪ - Nature of damage of Earhead bug/ Gundhi bug

ಪ್ರಬುದ್ಧ ಹಾಗೂ ಮರಿ ಕೀಟಗಳೆರಡೂ ಹಾನಿ ಮಾಡುತ್ತವೆ. ಮರಿಗಳು ಹೊರ ಬಂದ ಎರಡು-ಮೂರು ಘಂಟೆಗಳಲ್ಲಿ ಆಹಾರ ಸೇವನೆಗೆ ಆರಂಭಿಸತ್ತದೆ. ಎಲೆಗಳ ರಸವನ್ನು/ ಅಥವಾ ಹೊಸದಾಗಿ ಮೂಡುತ್ತಿರುವ ಸ್ಪೈಕ್ ಲೆಟ್ ಗಳ ಹಾಲನ್ನು ಹೀರುತ್ತವೆ. ಇದರಿಂದಾಅಗಿ ಕಾಳುಗಳು ಅರೆ ತುಂಬಿ ಅಥವಾ ಜೊಳ್ಳಾಗಿ ಬಿಡುತ್ತವೆ. ಹೆಚ್ಚಿನ ಧಾಳಿಯಾದಲ್ಲಿ ಇಳುವರಿ ಶೇ 50 ರಷ್ಟು ಕಡಿಮೆಯಾಗುವ ಸಾಧ್ಯತೆಗಳಿವೆ. ಹುಲ್ಲಿನಲ್ಲಿ ಜಾನುವಾರುಗಳಿಗೆ ಪಥ್ಯವಾಗದಂತಹ ವಾಸನಯರುತ್ತದೆ.

ಗುಂಡಿ ಹೇನಿನ ಜೀವನ ಹಂತಗಳು - Life stages of Earhead bug/ Gundhi bug

ಮೊಟ್ಟೆ: ಮೊಟ್ಟೆಗಳು ವೃತ್ತಾಕಾರದವುಗಳಾಗಿದ್ದು, ಕಂದು ಬಣ್ಣದ ಬೀಜಗಳಂತೆ ಕಾಣುತ್ತವೆ. ಅವು 2 ಮಿ.ಮೀ ಉದ್ದವಿದ್ದು, ಎಲೆಗಳ ಮೇಲ್ಮೈಯಲ್ಲಿ ನಡುವಿನ ನರ ಭಾಗದಲ್ಲಿ ಗುಂಪು ಗುಂಪಾಗಿ ಇಡಲಪಟ್ಟಿರತ್ತವೆ.

ಮರಿ: ಮೊದಲನೆಯ ಹಂತದ ಮರಿ ತಿಳಿ ಹಸಿರು ಬಣ್ಣದಿಂದ ಕೂಡಿದ್ದು, ಬೇರೆ ಬೇರೆ ಹಂತಗಳಲ್ಲಿ ಬೆಳೆದು ಕಡು ಹಸಿರು ಬಣ್ಣಕ್ಕೆ ತಿರುಗುತ್ತವೆ.

ಪ್ರಬುದ್ಧ ಕೀಟ: ಪ್ರಬುದ್ಧ ಕೀಟಗಳು ಹಸಿರು- ಹಳದಿ ಬಣ್ಣದವಾಗಿದ್ದು, ಉದ್ದನ, ಸಪೂರವಾಗಿ, ಸುಮಾರು ½ ಇಂಚಿನಷ್ಟು ಉದ್ದವಿದ್ದು, ಅದರದೇ ಆದ ತೀಕ್ಷ್ಣ ವಾಸನೆಯನ್ನು ಹೊಂದಿದೆ.

File Courtesy: 
ZARS, Mandya
Copy rights | Disclaimer | RKMP Policies