Best Viewed in Mozilla Firefox, Google Chrome

ರೈಸ್‌ ಕೇಸ್‌ ಕೀಟ - Rice case worm

PrintPrintSend to friendSend to friend

ರೈಸ್‌ ಕೇಸ್‌ ಕೀಟ - Rice case worm

ವೈಜ್ಞಾನಿಕ ಹೆಸರು - ನಿಂಫುಲಾ ಡಿಪಂಕ್ಟಾಲಿಸ್

ಆದೇಶ - ಪೈರಾಸ್ಟಿಡೇ

ಕುಟುಂಬ - ಲೆಪಿಡೊಪ್ಟೆರಾ

ರೈಸ್‌ ಕೇಸ್‌ ಕೀಟದ ಧಾಳಿಯ ಲಕ್ಷಣಗಳು – Symptom of attack of Rice case worm

ಸಸ್ಯಗಳ ಬೆಳವಣಿಗೆ ಕುಂಠಿತವಾಗುವುದು. ಕಂಬಳಿ ಹುಳುಗಳು ಕೊಳವೆಯಾಕಾರದ ಗೂಡಿನಲ್ಲಿ ಎಲೆಯ ತುದಿಗೆ ನೇತಾಡುವವು.

ರೈಸ್‌ ಕೇಸ್‌ ಕೀಟ ಮಾಡುವ ಹಾನಿ - Nature of damage of Rice case worm

ಕಂಬಳಿ ಹುಳುವು ಎಲೆಯ ತುಂಡನ್ನು ಕತ್ತರಿಸಿ ಉದ್ದನೆಯ ಸುರುಳಿಯಾಕಾರ ಮಾಡಿ ಒಳಗೆ ನೆಲಸುವುದು. ಹಸಿರು ಅಂಗಾಂಶವನ್ನು ಕೆರೆದು ತಿನ್ನುವುದು. ಇದು ನೀರಿನಲ್ಲಿ ತೇಲುವುದು. ಇದು ಮಾಡುವ ಹಾನಿಯು ಇತರೆ ಕೀಟಗಳು ಮಾಡುವ ಹಾನಿಗಿಂತ ಎರಡು ವಿಧದಲ್ಲಿ ಭಿನ್ನವಾಗಿರುವುದು. ಮೊದಲನೆಯದಾಗಿ ಇದು ಆಹಾರ ಸೇವನೆಗೆ ಹಿಂದೆ ಮುಂದೆ ಚಲಿಸುವುದರಿಂದ ಕತ್ತರಿಸಿದ ಎಲೆಯ ಭಾಗದಲ್ಲಿ ಏಣಿಯಾಕಾರದ ರಚನೆ ಕಾಣುವುದು.. ಎರಡನೆಯದು ಇದರ ಹಾನಿಯು ಗದ್ದೆಯ ಎಲ್ಲಾ ಭಾಗದಲ್ಲಿ ಒಂದೇ ರೀತಿ ಇರುವುದಿಲ್ಲ. ಇದು ನೀರಿನಲ್ಲಿ ತೇಲಿಹೋಗುವುದರಿಂದ ಗದ್ದೆಯ ಕೇಳಬಾಗದಲ್ಲಿ ಹೆಚ್ಚು ಹಾನಿಯಾಗಿರುವುದು.

ರೈಸ್‌ ಕೇಸ್‌ ಕೀಟದ ಜೀವನ ಹಂತಗಳು - Life stages of Rice case worm

ಮೊಟ್ಟೆ : ಮೊಟ್ಟೆ ತಿಳಿ ಹಳದಿಯಾಗಿರುವವು.ಚಪ್ಪಟೆಯಾಗಿದ್ದು, ನುಣೂಪಾಗಿ, ಅನಿಯಮಿತ ಆಕೃತಿಯಲ್ಲಿರುವವು. ಅವನ್ನು ತೇಲುವ ಎಲೆಯ ಕೆಳಭಾಗದಲ್ಲಿ ಇಡಲಾಗುವುದು.

ಲಾರ್ವಾ:ಇವು ಹಸಿರು ಕಂಬಳಿ ಹುಳುಗಳಾಗಿ ಹೊರಬರುವವು. ಕಿತ್ತಳೆ ಕಂದು ತಲೆ ಇರುವುದು. ಪ್ರತಿ ಕಂಬಳಿ ಹುಳುವು ಕೊಳವೆ ಆಕಾರದ ರಚನೆಯಲ್ಲಿರುವುದು ಒಂದು ಬದಿಯಲ್ಲಿ ತೆರೆದಿರುವುದು. ಗೂಡಿನ ಒಳಭಾಗದಲ್ಲಿ ರೇಷ್ಮೆಯಂತೆ ನುಣಪಾದ ಆವರಣವಿರುವುದು. ಅದು ತೇವವನ್ನು ಹಿಡಿದಿಟ್ಟು ಕೊಳ್ಳಬಲ್ಲದು . ಅದು ಅದರ ಉಸಿರಾಟಕ್ಕೆ ಅಗತ್ಯವಾಗಿದೆ. ಮತ್ತು ಲಾರ್ವವು ನಿರ್ಜಲಿಕರಣ ಗೊಳ್ಳುದನ್ನು ತಡೆಯುವುದು. ಗೂಡು ಪ್ರತಿ ಜ್ವರದ ಹಂತದಲ್ಲಿ ಬದಲಾಗುವುದು. ಅದು ಹೊರಚಾಚಿದ ಕಾಲುಗಳಿಂದ ಸಸ್ಯದ ಉದ್ದಕ್ಕೂ ಚಲಿಸಿ, ಹಸಿರು ಅಂಗಾಂಶವನ್ನು ಕೆರೆದು ತಿನ್ನುವುದು. ಸುಸ್ತಾದಾಗ ನೀರಿನಲ್ಲಿ ಮುಳುಗುವುದು.ಅಲ್ಲಿ ಆಮ್ಲ ಜನಕ ಪಡೆದು ಚೈತನ್ಯ ಪಡೆಯುವುದು. ಫೂರ್ಣ ಬೆಳೆದ ಕಂಬಳಿ ಹುಳುವು 15 ಮಿಮಿ ಉದ್ದಕ್ಕೆ ಬೆಳೆಯುವುದು.

ಕೋಶ: ಇದು ಗರಿಯ ನಡುವೆ ಕೋಶ ನಿರ್ಮಿಸುವುದು. ಮೊದಲಲ್ಲಿ ಹಾಲು ಬಿಳಿ ಬಣ್ಣವಿದ್ದು ನಂತರ ತಿಳಿ ಹಳದಿ ಬಣ್ಣಕ್ಕೆ ತಿರುಗುವುದು.

ವಯಸ್ಕ ಕೀಟ: ವಯಸ್ಕ ಕೀಟವು ಚಿಕ್ಕದಾದ ಚಿಟ್ಟೆ. ಬಿಳಿ ರೆಕ್ಕೆ ಮೇಲೆ ತಿಳಿಕಂದು ಅಲೆಗಳ ಗುರುತು. ಗಂಡಿಗಿಂತ ಹೆಣ್ಣು ದೊಡ್ಡದು. ರಾತ್ರಿಯಲ್ಲಿ ಮೊಟ್ಟೆ ಇಡುವುದು.

File Courtesy: 
ZARS, Mandya
Copy rights | Disclaimer | RKMP Policies