Best Viewed in Mozilla Firefox, Google Chrome

KRH-2 Hybrid Rice Cultivation - A farmer's experience in Karnataka

PrintPrintSend to friendSend to friend

ಗೋವಿಂದಪ್ಪ- ಕೆ ಆರ್ ಹೆಚ್- 2 ಮಿಶ್ರ ತಳಿ ಭತ್ತದ ಬೆಳೆಯಲ್ಲಿ ಎತ್ತಿದ ಕೈ

ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ 380 ಗ್ರಾಮಗಳು ಕೃಷಿಯಾಧಾರಿತವಾಗಿದ್ದು, ಅಲ್ಲಿನ ರೈತರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಈ ತಾಲೂಕಿನಲ್ಲಿ ಕೃಷಿಯು ಮಳೆಯಾಧಾರಿತವಾಗಿದ್ದು, ವಾರ್ಷಿಕ ಸರಾಸರಿ ಮಳೆ ಕೇವಲ 600-680 ಮಿ.ಮೀ. ಇರುತ್ತದೆ. ಇಲ್ಲಿನ ಕಷ್ಟಸಹಿಷ್ಣು ರೈತರು ಕೊಳವೆ ಬಾವಿ ಹಾಗೂ ಕೆರೆ ನೀರಾವರಿಅನ್ನು ಬಳಸಿ ಭತ್ತದ ಬೆಳೆ ಬೆಳೆಯುತ್ತಾರೆ. ಈ ತಾಲೂಕಿನ ಕೆನ್ನಹಳ್ಳಿ ಗ್ರಾಮದ ರೈತರಾದ ಶ್ರೀ ಗೋವಿಂದಪ್ಪ ಎನ್ನುವವರ ಗದ್ದೆಯಲ್ಲಿ ವಿಸ್ತರಣಾ ಶಿಕ್ಷಣ ಘಟಕ, ನಾಗೇನ ಹಳ್ಳಿ ಮತ್ತು ಮಿಶ್ರ ತಳಿ ಭತ್ತ ಯೋಜನೆ, ಮಂಡ್ಯ ಯು ಎ. ಎಸ್, ಇವರು ಜಂಟಿಯಾಗಿ ಕೆ ಆರ್ ಹೆಚ್-2 ಮಿಶ್ರ ತಳಿ ಭತ್ತದ ಬೆಳೆಯ ಮೇಲೆ ಮುಂಚೂಣಿಯ ಪ್ರಾತ್ಯಕ್ಷಿಕೆ ನಡೆಸಿದರು. ಈ ತಳಿಯ ಅದ್ಭುತ ಸಾಧೆಯಿಂದ ಪ್ರಭಾವಿತರಾದ ಆತ ಮುಂದೆ ಎಲ್ಲಾ ಕಾಲಗಳಲ್ಲೂ ಅದೇ ತಳಿಯನ್ನು ಬೆಳೆಯುವುದನ್ನು ಮುಂದುವರಸಿದರು. ಈ ವರೆಗೆ ಆತ ಈ ಹೈಬ್ರಿಡ್ ಭತ್ತವನ್ನು ಖಾರಿಫ್ 1999, ಬೇಸಗೆ 2000 ಹಾಗೂ ಖಾರಿಫ್ 2000 ಕಾಲಗಳಲ್ಲಿ ಕೊಯಿಲು ಮಾಡಿದ್ದಾರೆ. ಇವರ ಯಶಸ್ಸಿಗೆ ಕಾಂಪೋಸ್ಟ್ ಹಾಗೂ ಜೈವಿಕ ಗೊಬ್ಬರಗಳ ಬಳಕೆಯೂ ಕಾರಣವಾಗಿದೆ. ಆ ಕಾಲದ ಉತ್ತಮ ಪರೀಕ್ಷಾ ತಳಿಯಾದ 6.7 ಟ/ಹೆ ಜಯಾ ಬೆಳೆಗೆ ತುಲನೆ ಮಾಡಿದಾಗ ಆತ ಸರಾಸರಿ 9.9 ಟ/ಹೆ ನಷ್ಟು ಮಿಶ್ರ ತಳಿ ಕೆ ಆರ್ ಹೆಚ್-2 ಭತ್ತದ ಇಳುವರಿ ಪಡೆದಿದ್ದಾರೆ. ಬೇಸಗೆ 2000 ರ ಅವಧಿಯಲ್ಲಿ ಆತ ಗರಿಷ್ಠ ಪ್ರಮಾಣದ, ಅಂದರೆ, 10.13 ಟ/ಹೆ ಇಳುವರಿ ಪಡೆದಿದ್ದಾರೆ.

File Courtesy: 
ZARS, Mandya
Related Terms: Farmers InnovationFIS
Copy rights | Disclaimer | RKMP Policies