Best Viewed in Mozilla Firefox, Google Chrome

Producing the seeds of KRH-2 in the farmer's (Mr.Manjunath)field

PrintPrintSend to friendSend to friend

Producing the seeds of KRH-2 in the farmer's (Mr.Manjunath) field

ಶ್ರೀ. ಮಂಜುನಾಥ: ಮಿಶ್ರ ತಳಿ ಭತ್ತ- ಯಶಸ್ಸಿನ ಹಾದಿ

ಝೋನಲ್ ಅಗ್ರಿಕಲ್ಚರಲ್ ರಿಸರ್ ಸ್ಟೇಶನ್ (ವಲಯ ಕೃಷಿ ಸಂಶೋಧನಾ ಕೇಂದ್ರವು) ದೇಶದಲ್ಲೇ ಅತಿ ಶ್ರೇಷ್ಠ ಮಟ್ಟದ ಕೆ ಆರ್ ಹೆಚ್-2 ಮಿಶ್ರ ಭತ್ತದ ತಳಿಯನ್ನು ಅಭಿವೃದ್ಧಿ ಪಡಿಸಿದ ಹೆಗ್ಗಳಿಕೆಯನ್ನು ಪಡೆದಿದೆ. ಇದು ಮಧ್ಯಮ ಅವಧಿಯ, ಅಧಿಕ ಇಳುವರಿ ನೀಡುವ ಅತಿ ಸುದೃಢವಾದ ಭತ್ತದ ಮಿಶ್ರ ತಳಿ (ಸಂಕರ ತಳಿ)ಯಾಗಿದೆ. ದೇಶದ ಎಲ್ಲ ಪ್ರದೇಶಗಳಲ್ಲೂ ಅದರ ಶ್ರೇಷ್ಠತೆಯನ್ನು ಪರಿಗಣಿಸಿದ ಕೇಂದ್ರ ಬಿಡುಗಡೆಯ ಸಮಿತಿಯು, 2001 ರಲ್ಲಿ, ಪಂಜಾಬ್ ಮತ್ತು ಹರ್ಯಾನಾ ವನ್ನು ಹೊರತು ಪಡಿಸಿ ದೇಶದ ಇತರ ಎಲ್ಲಾ ಕಡೆಗಳಲ್ಲೂ ಈ ತಳಿಯನ್ನು ಬಿಡುಗಡೆಗೊಳಿಸಿತು. ಪರಿಣಾಮವಾಗಿ, ಈ ಮಿಶ್ರ ತಳಿ ಭತ್ತದ ಬಿತ್ತನೆ ಬೀಜಕ್ಕೆ ಬಹುವಾದ ಬೇಡಿಕೆ ಬಂತು. ಝೆಡ್ ಎ ಆರ್ ಎಸ್ ಗೆ ಅಗತ್ಯ ಪ್ರಮಾಣದಲ್ಲಿ ಬಿತ್ತನೆ ಬೀಜವನ್ನು ಪೂರೈಸವುದು ಅಸಾಧ್ಯವಾಯಿತು. ಮ್ಶ್ರ ತಳಿಯ ಬೀಜದ ಉತ್ಪಾದನೆಯು ಹಲವು ವಿಶೇಷ ತಂತ್ರಜ್ಞಾನಗಳಾದ ಅಡ್ಡ ಓಲು (staggered) ಬಿತ್ತನೆ, ಎಲೆ ತುಂಡರಿಸುವುದು, ಜಿ ಎ -3 ರ ಸಿಂಪಡಣೆ, ಹಗ್ಗ ಎಳೆಯುವುದು, ಇವೇ ಮೊದಲಾದ ಪ್ರಕ್ರಿಯೆಗಳನ್ನು ಬಳಕೆ ಮಾಡುತ್ತದೆ.

ಮಂಡ್ಯದ ಝೆಡ್ ಎ ಆರ್ ಎಸ್ ಮಿಶ್ರ ತಳಿ ಯೋಜನೆಯು, ರೈತರ ಗದ್ದೆಗಳಲ್ಲಿಯೇ ಕೆ ಆರ್ ಹೆಚ್-2 ಮಿಶ್ರ ತಳಿಯ ಬೀಜಗಳ ಉತ್ಪಾದನೆ ಮಾಡುವ ಒಂದು ನವೀನ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಆರಂಭದಲ್ಲಿ, ಕೇಂದ್ರದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿದ್ದ ಸಂಪಳ್ಳಿ ಗ್ರಾಮವನ್ನು ಆಯ್ಕೆ ಮಾಡಲಾಯಿತು. ಜೊತೆಯಲ್ಲಿ ಬೀಜೋತ್ಪಾದನೆಯ ವಿವಿದಹ ಂತಗಳ ಕುರಿತು ಆಯ್ಕೆಯಾದ ರೈತರಿಗೆ ಝ್ಡ್ ಎ ಆರ್ ಎಸ್ ಕೇಂದ್ರದಲ್ಲಿ ತರಬೇತಿ ನೀಡಲಾಯಿತು. ಪ್ರಗತಿ ಪರ ಕೃಷಿಕ ಶ್ರೀ ಮಂಜುನಾಥರ್ ಮುಂದಾಳತ್ವದಲ್ಲಿ ಸಂಪಳ್ಳಿಯ ರೈತರು ಕೆ ಆರ್ ಹೆಚ್ -2- ಮಿಶ್ರ ತಳಿ ಭತ್ತದ ಬೀಜೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದರು. ಶ್ರೀ ಮಂಜುನಥರು 0.4 ಹೆಕ್ಟೇರ್ ಪ್ರದೇಶದಲ್ಲಿ ಪ್ರಥಮ ಬಾರಿಗೆ 2000 ಇಸವಿಯ ಖಾರಿಫ್ ಹಂಗಾಮಿನಲ್ಲಿ ಬಿತ್ತನೆ ಬೀಜಯನ್ನು ಹಾಕಿ, 1.70 ಟನ್/ಹೆ ಹೈಬ್ರಿಡ್ (ಮಿಶ್ರ ತಳಿ) ಬೀಜದ ಇಳುವರಿ ಪಡೆದರು. ಆ ನಂತರ ಅವರು ನಿರಂತರವಾಗಿ ತಮ್ಮ ಗದ್ದೆಯಲ್ಲಿ ಮಿಶ್ರ ತಳಿಯನ್ನು (ಕೆ ಆರ್ ಹೆಚ್-2) ಬೆಳೆಯುತ್ತಿದ್ದಾರೆ. ವಿವಿಧ ಕಾಲಗಳಲ್ಲಿ ಅವರ ಗದ್ದೆಯಲ್ಲಿ ಪಡೆದ ಬೀಜದ ಫಸಲು ಮತ್ತು ಬೀಜೋತ್ಪಾದನೆಯ ಆರ್ಥಿಕ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. (ಪಟ್ಟಿ-ಅ).

ಪ್ರಸ್ತುತ, ಮಂಜುನಾಥರು ಹೈಬ್ರಿಡ್ (ಮಿಶ್ರ ತಳಿ) ಬೀಜಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಚೀನಾ ದೇಶಕ್ಕೆ ಸರಿಕಟ್ಟುವಂತೆ ಸುಮಾರು 1.76 ಟನ್/ಹೆ ನಷ್ಟು ಬೀಜೋತ್ಪಾದನೆ ಪಡೆಯುತ್ತಿದ್ದಾರೆ. ಮಂಜುನಾಥರ ಯಶಸ್ಸಿನಿಂದ ಪ್ರಭಾವಿತರಾದ ಇತರ 50 ಮಂದಿ ರೈತರು ಒಟ್ಟು 40 ಹೆಕ್ಟೇರ್ ಭೂಪ್ರದೇಶದಲ್ಲಿ ಮಿಶ್ರ ತಳಿ ಭತ್ತದ ಬೀಜೋತ್ಪಾದನೆಯಲ್ಲಿ ತೊಡಗಿದ್ದಾರೆ. ಇನ್ನು ಹಲವಾರು ಮಂದಿ ರೈತರು ಸಂಕರಣ ತಳಿಯ ಭತ್ತದ ಬೀಜೋತ್ಪಾದನೆಯತ್ತ ಉತ್ಸುಕರಾಗಿದ್ದರೂ ಪ್ರತ್ಯೇಕತೆಯ ಅಗತ್ಯವು ಒಂದು ತಡೆಯಾಗಿ ಪರಿಣಮಿಸಿದೆ. ಪ್ರತ್ಯೇಕತೆಯನ್ನು ಖಚಿತ ಪಡಿಸಲಾಗದ ಸಂದರ್ಭದಲ್ಲಿ, ಕಳೆದ ಐದು ಕಾಲ (ಹಂಗಾಮುಗಳಲ್ಲಿ) ಮಂಜುನಾಥರು ಸತತವಾಗಿ ತಮ್ಮ ಭೂಮಿಯಲ್ಲಿ ವಾಣಿಜ್ಯದ ಕೆ ಆರ್ ಹೆಚ್ -2 ಬೆಳೆಯನ್ನು ಬೆಳೆಯುತ್ತಿದ್ದಾರೆ. ಅಲ್ಲಿನ ಫಸಲು ಮತ್ತು ಆರ್ಥಿಕತೆಯ ವಿವರ ಹೀಗಿದೆ (ಪಟ್ಟಿ-ಬ)

ಹೀಗೆ ಮಂಜುನಾಥರು ಮೊದಲು ಬೆಳೆಯುತ್ತಿದ್ದ ಜಯಾ ತಳಿಯ 7.0 ರಿಂದ 7.5 ಟನ್/ಹೆ ಫಸಲಿಗೆ ತುಲನೆ ಮಾಡಿದಾಗ, ಮಿಶ್ರ ತಳಿ ಭತ್ತ ಕೆ ಆರ್ ಹೆಚ್-2 ರಿಂದ ಸರಾಸರಿ 10.14 ಟನ್/ಹೆ ಫಸಲನ್ನು ಪಡೆದಿದ್ದಾರೆ. ಹೀಗೆ ಅವರು ಪ್ರತಿ ಹೆಕ್ಟೇರಿಗೆ ರೂ.34, 900 ರಿಂದ ರೂ.35, 600 ರಷ್ಟು ಒಟ್ಟು ಆದಾಯ ಪಡೆದಿದ್ದು ಅದೇ ಗ್ರಾಮದಲ್ಲಿ, ಇತರರಿಗೆ ಬೇರೆ ತಳಿಯನ್ನು ಬೆಳೆದು ಬರುವ ಒಟ್ಟು ಆದಾಯಕ್ಕಿಂತ ರೂ. 14, 800 ರಿಂದ ರೂ. 15, 400ರಷ್ಟು ಹೆಚ್ಚಾಗಿದೆ. ಈ ಹೆಚ್ಚುವರಿ ಆದಾಯದಿಂದ ಆತ ತನ್ನ ಮನೆಯನ್ನು ದುರಸ್ತಿ ಮಾಡಿಸಿಕೊಂಡಿರುವುದಲ್ಲದೆ, ಪೀಥೋಪಕರಣಗಳು, ಟಿ.ವಿ,ರೆಫ್ರಿಜರೇಟರ್ (ಫ್ರಿಡ್ಜ್), ವಾಶಿಂಗ್ ಮೆಶಿನ್ ಇತ್ಯಾದಿಗಳನ್ನು ಕೊಂಡಿಕೊಂಡಿದ್ದಾರೆ. ಆತ ಮಂಡ್ಯ ಪಟ್ಟಣದೊಳಗೆ ಒಂದು ನಿವೇಶನವನ್ನೂ ಕೊಂಡುಕೊಂಡಿದ್ದಾರೆ. ಈಗ ಇವರು ರೈತ ನಾಯಕನಾಗಿರುವುದಲ್ಲದೆ, ಸ್ಥಳೀಯ ವಿಸ್ತರಣಾ ಕೆಲಸಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ರೈತ ಸಹವರ್ತಿಗಳು, ಮಿಶ್ರ ತಳಿ ಭತ್ತದ ಬೀಜೋತ್ಪಾದನೆಯ ಹಾಗೂ ಕೃಷಿಯ ಕುರಿತಾದ ತಾಂತ್ರಿಕ ಸಲಹೆಗಳಿಗಾಗಿ ಇವರನ್ನು ಭೇಟಿಮಾಡುತ್ತಾರೆ. ಇವರ ಭತ್ತದ ಬೆಳೆಯುವ ಕ್ಷೇತ್ರವು ಕೃಷಿ ಇಲಾಖೆಗೆ ಪ್ರಾತ್ಯಕ್ಷಿಕಾ ಕ್ಷೇತ್ರವಾಗಿದೆ. ಇವರ ಕ್ಶೇತ್ರವನ್ನು ಭೇಟಿ ಮಾಡಿರುವಂತಹ ಹಲವಾರು ವಿದೇಶೀ ಗಣ್ಯರು ಹಾಗೂ ಮಿಶ್ರ ತಳಿ ವಿಜ್ಞಾನಿಗಳು ಆತನ ಪ್ರಯತ್ನ ಹಾಗೂ ಯಶಸ್ಸಿನಿಂದ ಪ್ರಭಾವಿತರಾಗಿದ್ದಾರೆ. ಅವರ ಗದ್ದೆಯಲ್ಲಿ ಹಮ್ಮಿಕೊಂಡಿದ್ದ ಫೀಲ್ಡ್ ಡೇ ದಿನಾಚರಣೆಯು ಅವರ ಗ್ರಾಮದ ರೈತರನ್ನಲ್ಲದೆ ಸಂಪೂರ್ಣ ಜಿಲ್ಲೆಯ ರೈತರನ್ನೂ ಆಕರ್ಷಿಸಿದೆ. ಮಂಜುನಾಥರ ಯಶೋಗಾಥೆಯನ್ನು ರಾಜ್ಯಮಟ್ಟದ ಪತ್ರಿಕೆಗಳು ಮತ್ತು ಈ-ಟಿ ವಿ ಸುದ್ದಿ ಮಾಧ್ಯಮವು ಹಲವಾರು ಸಾರಿ ಬಿತ್ತರ ಮಾಡಿದೆ.

File Courtesy: 
ZARS, Mandya
Related Terms: Farmers InnovationFIS
Copy rights | Disclaimer | RKMP Policies